ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಮೂರು ಲಕ್ಷ ನಗದು ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಜಯಲಕ್ಷ್ಮೀ ಮನೆ ಕೆಲಸದವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಮನೆ ಕೆಲಸದವರು ನಾವು ಹಣ ಕದ್ದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕಳ್ಳತನವಾದ ದಿನ ಫ್ಲಾಟ್‌ನಲ್ಲಿ ವಿಜಯಲಕ್ಷ್ಮೀ ತಾಯಿ ಸೇರಿ ಐವರಿದ್ದರು. ಫ್ಲಾಟ್ ಒಳಗೆ ಸಿಸಿ ಕ್ಯಾಮರಾ ಇರಲಿಲ್ಲ. ಆದರೆ ಗಾರ್ಡನ್ ಏರಿಯಾ ಬಳಿ ಸೆಕ್ಯೂರಿಟಿ, ಲಿಫ್ಟ್ ಬಳಿ ಮಾತ್ರ ಸಿಸಿ ಕ್ಯಾಮರಾ ಇತ್ತು.
ಇದನ್ನು ಓದಿ : ಬಳ್ಳಾರಿ ಜೈಲಿಗೆ ನಟ ದರ್ಶನ್ : ಆದೇಶ ಕಾಯ್ದಿರಿಸಿದ ಕೋರ್ಟ್
ಇದನ್ನು ಪರಿಶೀಲನೆ ನಡೆಸಿದಾಗ ಮನೆ ಒಳಗೆ ಯಾರೂ ಇರಲಿಲ್ಲ. ಆದರೆ ಮನೆಕೆಲಸದವರು ನಾವು ಕದ್ದಿಲ್ಲ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ತಾಯಿಯಿಂದ ಮಾಹಿತಿ ಪಡೆಯಲಿದ್ದಾರೆ.
ಇನ್ನು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಮೂರು ಲಕ್ಷ ನಗದು ಕಳ್ಳತನವಾಗಿದ್ದು, ದೂರು ದಾಖಲಾಗಿದೆ. ಪ್ರಕರಣ ಸಂಬಂಧ ದರ್ಶನ್ ಮ್ಯಾನೇಜರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.





