Mysore
16
scattered clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಮೈಸೂರು ದಸರಾ | ಯುವ ಸಂಭ್ರಮಕ್ಕೆ ವರ್ಣರಂಚಿತ ಚಾಲನೆ

dasara

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ, ಯುವಕ-ಯುವತಿಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಯುವ ಸಂಭ್ರಮಕ್ಕೆ ಬುಧವಾರ ಸಂಜೆ ಮೈಸೂರು ವಿವಿಯ ಬಯಲು ರಂಗಮಂದಿರದಲ್ಲಿ ಚಾಲನೆ ಸಿಕ್ಕಿದೆ.

ನಟ ಯುವ ರಾಜಕುಮಾರ್ ಹಾಗೂ ಮೈಸೂರಿನ ಅಮೃತ ಅಯ್ಯಂಗಾರ್ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಸಚಿವ ಕೆ.ವೆಂಕಟೇಶ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಥ್‌ ನೀಡಿದರು.

ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬವಾದ ಯುವ ಸಂಭ್ರಮ ಸೆ.10ರಿಂದ 17ರವರೆಗೆ ನಡೆಯಲಿದ್ದು, 500 ಕಾಲೇಜಿನ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಅಭಿನಯದ ಮೂಲಕ ರಂಜಿಸಲಿದ್ದಾರೆ. ರಾಜ್ಯದ ಜಾನಪದ ನೃತ್ಯಗಳು, ಜಿಲ್ಲಾ ಕೇಂದ್ರಿತ ಪ್ರಸಿದ್ದ ನೃತ್ಯ ಪ್ರಕಾರಗಳು, ಕನ್ನಡ ಸಿನಿಮಾ ಆಧಾರಿತ ಆಧುನಿಕ ನೃತ್ಯಗಳು, ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ-ಅರಣ್ಯ, ಆಡಳಿತ, ಸಾಮಾಜಿಕ ನ್ಯಾಯ, ವಿಜ್ಞಾನ-ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆಗಳು, ಶಿಕ್ಷಣ, ಕ್ರೀಡೆ, ಜನಕೇಂದ್ರಿತ, ಆರೋಗ್ಯ ಹೀಗೆ ನಿರ್ದಿಷ್ಟ ಥೀಮ್ ಆಧಾರಿತ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.

ಪ್ರತಿದಿನ ಸಂಜೆ 4ರಿಂದ ರಾತ್ರಿ 10.30ರವರೆಗೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನವಿರಲಿದೆ. ಆಯ್ದ ತಂಡಗಳಿಗೆ ನವರಾತ್ರಿ ಸಂದರ್ಭದಲ್ಲಿ ನಡೆಯುವ ಯುವ ದಸರಾ ವೇದಿಕೆಯಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಸಿನಿ ತಾರೆಯರ ಮೆರಗು
ಯುವ ಸಂಭ್ರಮದ ಉದ್ಘಾಟನಾ ಸಮಾರಂಭಕ್ಕೆ ಪ್ರತಿವರ್ಷದಂತೆ ಈ ಬಾರಿ ಕೂಡ ಸಿನಿಮಾ ತಾರೆಯರು ಮೆರಗು ನೀಡಿದರು.

ಪ್ರತಿಭೆ ಅನಾವರಣಕ್ಕೆ ಸಾಕ್ಷಿ
ದಸರಾ ಹಿನ್ನೆಲೆಯಲ್ಲಿ ಹತ್ತು ದಿನಗಳು ನಡೆಯುವ ಯುವ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಮುಖವಾಗಿ ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ತಂಡ ವಿವಿಧ ವಿಷಯಗಳಿಂದ ಕೂಡಿದ ಹಾಡು, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

Tags:
error: Content is protected !!