Mysore
27
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಮದ್ದೂರು | ಕಲ್ಲು, ಮಚ್ಚು, ಲಾಂಗ್ ಸಂಸ್ಕೃತಿ ನಿಲ್ಲಬೇಕು : ನಿಖಿಲ್ ಕುಮಾರಸ್ವಾಮಿ

nikhil kumaraswamy

ಮದ್ದೂರು : ಎರಡು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮೂರು ಬಾರಿ ಇಂತಹ ಘಟನೆ ನಡೆದಿದೆ. ಕೆರಗೋಡು, ನಾಗಮಂಗಲ ಬಳಿಕ ಮದ್ದೂರಿನಲ್ಲಿ ನಡೆದಿದೆ. ಮದ್ದೂರಿನಲ್ಲಿ ಭಾನುವಾರದಿಂದ ಅಶಾಂತಿ ವಾತಾವರಣ ನಿರ್ಮಾಣ ಆಗಿದೆ ಎಂದು ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಹಿಂದೂ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಮಾತನಾಡಿದ ಅವರು, ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ದೂರಿದರು.

ಘಟನೆ ನಿಯಂತ್ರಿಸಲು ಪೊಲೀಸರೇ ಅಸಹಾಯಕರಾಗಿದ್ದಾರೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಕೋಮುಗಲಭೆ ಮಾಡಿದವರ ಬಂಧನ ಆಗಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ಕೈ ಬಿಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಒತ್ತಡಕ್ಕೆ ಮಣಿದರೆ ನಾವು ಕೈಕಟ್ಟಿ ಕೂರಲ್ಲ. ಮಚ್ಚು, ಲಾಂಗ್ ಸಂಸ್ಕೃತಿ ಹೊಂದಿರುವ ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟಬೇಕು ಎಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.

ಮಂಡ್ಯ ಶಾಂತಿಗೆ ಹೆಸರುವಾಸಿ ಆದ ಜಿಲ್ಲೆ. ಆ ಗೌರವ ಉಳಿಸಿಕೊಳ್ಳಬೇಕಾಗಿದು ನಮ್ಮ ಜವಾಬ್ದಾರಿ. ಈಗಾಗಲೇ ಹಿಂದೂಪರ ಸಂಘಟನೆಗಳು ಮಂಗಳವಾರ ಮದ್ದೂರು ಬಂದ್‌ಗೆ ಕರೆ ಕೊಟ್ಟಿವೆ ಎಂದು ಹೇಳಿದರು.

ಬೇಲ್ ಆಗದಂತೆ ಕಾಯ್ದೆ
ಘಟನೆ ನಡೆದ ತಕ್ಷಣ ಪ್ರಮುಖ ಆರೋಪಿಗಳನ್ನ ಬಂಧಿಸಿದ್ದೇವೆ. ಸಿಸಿಟಿವಿ ದೃಶ್ಯ, ಮೊಬೈಲ್ ವಿಡಿಯೋ ಆಧರಿಸಿ ಬಂಧಿಸಿದ್ದು, ಇನ್ನೂ ಹಲವು ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಈ ಘಟನೆಯಲ್ಲಿ ಭಾಗಿಯಾಗಿರುವವರಿಗೆ ಬೇಲ್ ಆಗದಂತೆ ಸೆಕ್ಷನ್‌ಗಳನ್ನ ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ. ಕುಮ್ಮಕ್ಕು ಕೊಟ್ಟವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ. ನಮಗೆ ಸಹಕಾರ ಕೊಟ್ಟು ಶಾಂತಿ ರೀತಿ ವರ್ತಿಸಿ ಎಂದು ಕೋರಿದರು.

Tags:
error: Content is protected !!