Mysore
26
broken clouds

Social Media

ಮಂಗಳವಾರ, 15 ಸೆಪ್ಟೆಂಬರ್ 2026
Light
Dark

ಕಾರಿನಲ್ಲಿಯೇ ಕುಳಿತ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ ಯೋಜನಾಧಿಕಾರಿ

ಪ್ರಭಾರ ಯೋಜನಾಧಿಕಾರಿ

ಕೊಡಗು: ಪ್ರಭಾರ ಯೋಜನಾಧಿಕಾರಿಯೊಬ್ಬರು ಕಾರಿನಲ್ಲಿಯೇ ಕುಳಿತ ಸ್ಥಿತಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಪ್ರಭಾರ ಯೋಜನಾಧಿಕಾರಿ ಮನಮೋಹನ್‌ ರಾಯ್‌ ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.

ತಿತಿಮತಿ ಗ್ರಾಮದಲ್ಲಿ ವಾಸವಾಗಿದ್ದ ಮನಮೋಹನ್‌ ರಾಯ್‌, ತಮ್ಮ ಕಾರನ್ನು ಸರ್ವಿಸ್‌ ಮಾಡಿಸಲೆಂದು ಪಿರಿಯಾಪಟ್ಟಣಕ್ಕೆ ತೆರಳಿದ್ದರು.

ಬಳಿಕ ವಾಪಸ್‌ ಬರುವಾಗ ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದ ಬಳಿ ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮನಮೋಹನ್‌ ರಾಯ್‌ ಮೃತಪಟ್ಟಿದ್ದಾರೆ.

ಮನಮೋಹನ್‌ ರಾಯ್‌ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Tags:
error: Content is protected !!