Mysore
24
haze

Social Media

ಶನಿವಾರ, 10 ಜನವರಿ 2026
Light
Dark

ಇಂದು ರಾತ್ರಿ ರಕ್ತವರ್ಣದಲ್ಲಿ ಚಂದ್ರದರ್ಶನ

ಬೆಂಗಳೂರು: ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಿದೆ. ರಾತ್ರಿ 9.57ಕ್ಕೆ ಆರಂಭವಾಗಿ ತಡರಾತ್ರಿ 1.26ಕ್ಕೆ ಅಂತ್ಯವಾಗಲಿದ್ದು, ರಕ್ತ ವರ್ಣದಲ್ಲಿ ಚಂದ್ರನ ದರ್ಶನವಾಗಲಿದೆ.

ಖಗೋಳದ ಅಪೂರ್ವ ವಿದ್ಯಾಮಾನ ಖಗ್ರಾಸ ಚಂದ್ರಗ್ರಹಣ ಇಂದು ರಾತ್ರಿ ಜರುಗಲಿದ್ದು, ಚಂದ್ರ ರಕ್ತವರ್ಣ ಅಥವಾ ತಾಮ್ರವರ್ಣದಲ್ಲಿ ಗೋಚರಿಸಲಿದ್ದಾನೆ.

5 ಗಂಟೆ 27 ನಿಮಿಷಗಳ ಕಾಲ ಗ್ರಹಣ ಇರಲಿದೆ. ಒಂದು ಗಂಟೆ 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದ್ದು, ಬರಿ ಗಣ್ಣಿನಲ್ಲೇ ಚಂದ್ರನನ್ನು ವೀಕ್ಷಿಸಬಹುದಾಗಿದೆ.

ಇಂದು ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗಲಿದೆ. ಇದು ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲಿ ಕೆಂಪು ಚಂದಿರನನ್ನು ವೀಕ್ಷಣೆ ಮಾಡಬಹುದಾಗಿದೆ. ತಡರಾತ್ರಿ 1.26ಕ್ಕೆ ಗ್ರಹಣ ಮುಕ್ತಾಯವಾಗಲಿದೆ.

ಸೂರ್ಯ, ಭೂಮಿ ಹಾಗೂ ಚಂದ್ರ ಸರಳರೇಖೆಯಲ್ಲಿ ಬಂದಾಗ ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತವರ್ಣದ ಚಂದ್ರ ಗೋಚರಿಸುತ್ತದೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವಾಲಯಗಳನ್ನು ಇಂದು ಮಧ್ಯಾಹ್ನದಿಂದಲೇ ಬಂದ್‌ ಮಾಡಲಾಗುತ್ತದೆ.

Tags:
error: Content is protected !!