Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ:  ದಸರಾ ಉದ್ಘಾಟನೆ: ವಾಕ್ಸಮರ ನಿಲ್ಲಲಿ

dgp murder case

ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಉದ್ಘಾಟಕರ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಓದುಗರ ಪತ್ರ: ಚರಂಡಿ ತ್ಯಾಜ್ಯ ತೆರವುಗೊಳಿಸಲು ಮನವಿ

ವಿರೋಧ ಪಕ್ಷಗಳು ಉದ್ಘಾಟನೆಯ ಸಮಯದಲ್ಲಿ ಕಪ್ಪು ಬಾವುಟ ಪ್ರದರ್ಶಿಸಬಹುದು ಅಥವಾ ಪ್ರತಿಭಟನೆ ನಡೆಸಬಹುದು. ಏನೇ ಆದರೂ ಉದ್ಘಾಟನೆ, ನಡೆದೇ ತೀರುತ್ತದೆ. ಆದರೆ ಇಷ್ಟೊಂದು ಗೊಂದಲಮಯ ಪರಿಸ್ಥಿತಿ ಹಿಂದೆಂದೂ ಕಂಡುಬಂದಿರಲಿಲ್ಲ. ಅಷ್ಟರಮಟ್ಟಿಗೆ ಪ್ರಸಕ್ತ ವಿದ್ಯಮಾನಗಳು ದುರಾದೃಷ್ಟಕರ ಎಂದು ಹೇಳಬಹುದು.

– ಕೆ .ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!