ಮೈಸೂರು ಜಿಲ್ಲೆಯ ಅತಿ ಹಿಂದುಳಿದ ತಾಲ್ಲೂಕಾದ ಎಚ್.ಡಿ.ಕೋಟೆ ವ್ಯಾಪ್ತಿಯ ಕಾಕನಕೋಟೆ ಹತ್ತಿರ ಇರುವ ಆನೆಮಾಳ ಗಿರಿಜನ ಮಕ್ಕಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲದೆ ಮಕ್ಕಳು ಪರಿತಪಿಸುವಂತಾಗಿದೆ.
ಇದನ್ನೂ ಓದಿ: ‘ಈಗ ನನ್ಹ ತ್ರ ಇರೋದು ಒಂದು ಜೋಳಿಗೆ ಅಷ್ಟೇ ಎಲ್ಲಿಗ್ ಬೇಕಾದ್ರ ಹೋಗೇನೆ’
ಈ ಶಾಲೆಯಲ್ಲಿ ಸುಮಾರು ೪೦ ರಿಂದ ೫೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಳೆಗಾಲದಲ್ಲಿ ನೀರು ಸೋರುವುದರಿಂದ ಒಂದೇ ಕೊಠಡಿಯಲ್ಲಿ ಕುಳಿತು ಕಲಿಯಬೇಕಾಗಿರುವುದು ವಿಪರ್ಯಾಸವೇ ಸರಿ. ನಮ್ಮ ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕು ಹಾಗೂ ಸಂವಿಧಾನ ಜಾರಿಯಾದ ೧೦ ವರ್ಷದ ಅವಧಿಯೊಳಗೆ ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ಒದಗಿಸಬೇಕು ಎಂದು ತಿಳಿಸಿದ್ದರೂ ಇಲ್ಲಿನ ಮಕ್ಕಳು ಅದರಿಂದ ವಂಚಿತರಾಗಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಗಮನ ಹರಿಸುವುದು ಅತ್ಯಗತ್ಯ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





