ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯ ಅಮಾನಿ ಕೆರೆ ತಪ್ಪಲಿನ ನಾಗರಾಜ ನಾಯಕ ಅವರ ತೊಟದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿರುವ ಘಟನೆ ನಡೆದಿದೆ.
ಪಟ್ಟಣದ ಸಮಿಪವೇ ಹುಲಿ, ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಹುಲಿ, ಚಿರತೆಗಳನ್ನು ಸೆರೆಹಿಡಿದು ಸಾರ್ವಜನಿಕರಲ್ಲಿರುವ ಆತಂಕ ದೂರ ಮಾಡಬೇಕು.
ಹುಲಿ ದಾಳಿಯಿಂದ ಹಸು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಹೇಶ್ ಅಣ್ಣೂರುಕೇರಿ ಒತ್ತಾಯಿಸಿದ್ದಾರೆ.





