Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

ಹನೂರು: ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಎಗರಿಸಿದ ಖದೀಮರು

temple robbery

ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ದೊಡ್ಡಲ್ಲತ್ತೂರು ಮಾರಮ್ಮ ದೇವಾಲಯದಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಇಲ್ಲಿನ ದೇವಾಲಯದ ಬೀಗ ಹೊಡೆದು ಒಳನುಗ್ಗಿರುವ ದುಷ್ಕರ್ಮಿಗಳು, ದೇವಾಲಯದ ಒಳಗೆ ಇದ್ದ ಎರಡು ಹುಂಡಿಗಳನ್ನು ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಅರಮನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಾಜವಂಶಸ್ಥರು

ಕಳ್ಳರು ದೋಚಿದ ಹಣದ ಪ್ರಮಾಣ ಇನ್ನೂ ಖಚಿತವಾಗಿಲ್ಲ. ದೋಚಿದ ಬಳಿಕ ಹುಂಡಿಗಳನ್ನು ದೇವಾಲಯದ ಮುಂಭಾಗದ ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ.

ಮಾಹಿತಿ ದೊರೆತ ತಕ್ಷಣ ರಾಮಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Tags:
error: Content is protected !!