Mysore
16
scattered clouds

Social Media

ಬುಧವಾರ, 21 ಜನವರಿ 2026
Light
Dark

ಅಮ್ಮನನ್ನು ನೆನೆದು ಭಾವುಕರಾದ ಪ್ರಧಾನಿ ನರೇಂದ್ರ ಮೋದಿ: ಯಾಕೆ ಗೊತ್ತಾ?

narendra modi

ನವದೆಹಲಿ: ಬಿಹಾರದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ತಮ್ಮ ತಾಯಿಯ ವಿರುದ್ಧ ಅಶ್ಲೀಲ ಪದಗಳಿಂದ ಕೂಡಿದ ಘೋಷಣೆಗಳನ್ನು ಕೂಗಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಅವರಿಂದು ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ಮಾತನಾಡಿದ ಅವರು, ತಾಯಿಯೇ ನಮ್ಮ ಜಗತ್ತು. ತಾಯಿ ನಮ್ಮ ಸ್ವಾಭಿಮಾನ. ಬಿಹಾರದ ನೆಲದಲ್ಲಿ ಕೆಲವು ದಿನಗಳ ಹಿಂದೆ ಏನಾಯಿತೋ ಅದನ್ನು ನಾನು ಊಹಿಸಿರಲಿಲ್ಲ. ಬಿಹಾರದಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ವೇದಿಕೆಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರಿಗೆ ಧರ್ಮಸ್ಥಳದ ವಿವಾದ ಕೊನೆಗೊಳ್ಳುವುದು ಬೇಕಿಲ್ಲ: ಮಾಜಿ ಸಿಎಂ ವೀರಪ್ಪ ಮೊಯ್ಲಿ

ಈ ನಿಂದನೆ ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ. ಇದು ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಹಾಗೂ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ನನ್ನ ತಾಯಿಯನ್ನು ಈ ರೀತಿ ನಿಮ್ಮ ಕೆಟ್ಟ ರಾಜಕೀಯದೊಳಗೆ ಏಕೆ ಎಳೆದಿರಿ? ಎಂದು ಪ್ರಶ್ನೆ ಮಾಡಿದ್ದಾರೆ.

Tags:
error: Content is protected !!