ಮದ್ದೂರು : ಕುಟುಂಬದಲ್ಲಿನ ಆಸ್ತಿ ಕಲಹ ಹಿನ್ನೆಲೆಯಲ್ಲಿ ಮಲತಾಯಿಯೊಬ್ಬರು ಮಲ ಮಗಳ ಮೇಲೆ ದೌರ್ಜನ್ಯ ಮಾಡಿರುವ ಘಟನೆ ತಾಲೂಕಿ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮಲತಾಯಿ ಭಾಗ್ಯ ಎಂಬ ಮಹಿಳೆ ಮಲ ಮಗಳು ರೋಜಾಳನ್ನು ನಾಟಿ ಮಾಡಲು ಸಿದ್ದವಾಗಿದ್ದ ಜಮೀನಿನಲ್ಲಿ ಕೆಳಗೆ ಹಾಕಿಕೊಂಡು ದಬ್ಬಾಳಿಕೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಗ್ರಾಮದ ಪುಟ್ಟಸ್ವಾಮಿ ಎಂಬುವರಿಗೆ ಇಬ್ಬರು ಹೆಂಡ್ತಿಯರು ಮೊದಲ ಹೆಂಡ್ತಿಗೆ ಇಬ್ಬರು ಮಕ್ಕಳಿದ್ದು, ಹಲವು ವರ್ಷಗಳ ಹಿಂದೆ ಮೊದಲ ಹೆಂಡ್ತಿ ಮೃತ ಪಟ್ಟ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಭಾಗ್ಯ ಎಂಬುವವರನ್ನು 2 ನೇ ವಿವಾಹವಾದರು. ವಿವಾಹವಾದ ಕೆಲವೇ ತಿಂಗಳಲ್ಲಿ ಪುಟ್ಟಸ್ವಾಮಿ ಮೃತಪಟ್ಟರು ಎನ್ನಲಾಗಿದೆ.
ಇದರಿಂದ ಮೊದಲ ಹೆಂಡ್ತಿಯ ಮಕ್ಕಳು ಹಾಗೂ 2 ನೇ ಹೆಂಡ್ತಿ ಭಾಗ್ಯ ಎಂಬುವರ ನಡುವೆ ಜಮೀನಿನ ವಿಚಾರವಾಗಿ ಆಗಾಗೇ ಕಲಹ ನಡೆಯಿತ್ತು. ಭಾನುವಾರ ಜಮೀನಿನ ಬಳಿ ಮಲತಾಯಿ ಭಾಗ್ಯ ನಾಟಿ ಮಾಡುವ ಸಂದರ್ಭದಲ್ಲಿ ಸ್ಥಳಕ್ಕೆ ಮಗಳು ರೋಜಾ ಬಂದಾಗ ಜಮೀನಿನಿ ವಿಷಯವಾಗಿ ಇಬ್ಬರು ನಡುವೆ ಜಗಳ ನಡೆದು ಕೊನೆಗೆ ಮಲತಾಯಿ ಭಾಗ್ಯ ಮಗಳು ರೋಜಾ ಅವರನ್ನು ಕೆಳಗೆ ಹಾಕಿ ಮೇಲೆ ಕುಳಿತುಕೊಂಡು ದೌರ್ಜನ್ಯ ಮಾಡಿದ್ದಾರೆ ಎಂದು ಮಗಳು ರೋಜಾ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





