Mysore
26
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಬಾನು ಮುಷ್ತಾಕ್ ಉದ್ಘಾಟನೆಗೆ ತಕರಾರಿಲ್ಲ : ಯದುವೀರ್

ಮೈಸೂರು : ಸಾಹಿತಿ ಬಾನು ಮುಷ್ತಾಕ್ ಅವರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ತಕರಾರಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಬಾನು ಮುಷ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ಆದರೆ ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ.

ನಮ್ಮ ಕನ್ನಡದ ಧ್ವಜದ ಬಣ್ಣಗಳ ಕುರಿತು ಅವರ ಹೇಳಿಕೆ ನೋಡಿದ್ದೇನೆ. ಅದು ತಪ್ಪು. ಅದಕ್ಕಾಗಿಯೇ ಕೆಲವರು ವಿರೋಧ ಮಾಡುತ್ತಿದ್ದಾರೆ. ನಮ್ಮ ಧರ್ಮಕ್ಕೆ ವಿರೋಧಿಸದೆ ಅವರು ಉದ್ಘಾಟನೆ ಮಾಡಲಿ. ನಮ್ಮ ಧಾರ್ಮಿಕ ಭಕ್ತಿಗೆ ಧಕ್ಕೆ ಬರಬಾರದು. ಚಾಮುಂಡೇಶ್ವರಿಗೆ ಗೌರವ ಕೊಡಬೇಕು ಅದಷ್ಟೇ ನಮ್ಮ ಅಭಿಪ್ರಾಯ. ನಮ್ಮ ಪಾರ್ಟಿಯ ನಿಲುವಿಗೆ ನನ್ನ ನಿಲುವು ಒಂದೇ. ನಮ್ಮ ಧರ್ಮ ಗೌರವಿಸಿ ಚಾಮುಂಡೇಶ್ವರಿಗೆ ಕೊಡಬೇಕಾದ ಗೌರವವನ್ನು ಮುಸ್ತಾಕ್ ಅವರು ನೀಡಲಿ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

Tags:
error: Content is protected !!