Mysore
24
scattered clouds

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಅಹಮದಾಬಾದ್|‌ 15 ಜನ ಪಾಕ್‌ ಮೀನುಗಾರರ ಬಂಧನ

fishh

ಅಹಮದಾಬಾದ್:‌ ಗುಜರಾತ್‌ನ ಕಚ್‌ ಕರಾವಳಿ ಪ್ರದೇಶದಲ್ಲಿ ಅಪರಿಚಿತ ಬೋಟ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ 15 ಜನ ಪಾಕ್‌ ಮೀನುಗಾರರನ್ನು ಬಂಧಿಸಿದೆ.

ಅಪರಿಚಿತ ಬೋಟ್‌ ಪತ್ತೆ ಪ್ರಕರಣ ಸಂಬಂಧ ಶೋಧ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್‌ 15 ಪಾಕ್‌ ಮೀನುಗಾರರನ್ನು ಬಂಧಿಸಿದೆ.

ಬಂಧಿತರನ್ನು ಪಾಕಿಸ್ತಾನದ ಸಿಂಧಿ ಪ್ರಾಂತ್ಯದ ಸುಜಾವಲ್‌ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ದೋಣಿಯಲ್ಲಿ 60 ಕೆಜಿ ಮೀನು, 9 ಮೀನು ಹಿಡಿಯುವ ಬಲೆ, ಐಸ್‌ಗೆಡ್ಡೆ, ಆಹಾರ, ಮರದ ತುಂಡು, 200 ಪಾಕಿಸ್ತಾನ ಕರೆನ್ಸಿ ಹಾಗೂ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!