Mysore
35
scattered clouds

Social Media

ಶನಿವಾರ, 25 ಏಪ್ರಿಲ 2026
Light
Dark

ಮರಕ್ಕೆ ಕಾರು ಡಿಕ್ಕಿ : ಮೂವರು ಗಂಭೀರ

ಹನೂರು : ಪಟ್ಟಣದ ಹೊರವಲಯದಲ್ಲಿರುವ ಎಲ್ಲೇಮಾಳ ರಸ್ತೆಯಲ್ಲಿ ಕಾರು ರಸ್ತೆಬದಿಯ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಕಡೆಯಿಂದ ಹನೂರಿನತ್ತ ಬರುತ್ತಿದ್ದ (ಕೆಎ ೪೧ ಬಿ ೮೨೯೬) ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನ ಚಾಲಕ ಬೆಂಗಳೂರು ಮೂಲದ ಕೆಂಗೇರಿ ನಿವಾಸಿ ಸಿದ್ದರಾಜು (೩೯), ಸಹಪ್ರಯಾಣಿಕರಾದ ಮೂಗೂರು ಮೋಳೆ ಗ್ರಾಮದ ಚಿಕ್ಕಣ್ಣ (೪೦), ರೇವಣ್ಣ (೫೦) ಎಂಬ ಮೂವರಿಗೆ ಪೆಟ್ಟಾಗಿದೆ. ಅವರನ್ನು ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರು ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!