Mysore
24
broken clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಬಂಡೀಪುರದಲ್ಲಿ ನಾಲ್ಕು ಮರಿಗಳಿರುವ ತಾಯಿ ಹುಲಿಗೆ ಗಾಯ: ಪ್ರಾಣಿಪ್ರಿಯರ ಆತಂಕ

tigre

ಗುಂಡ್ಲುಪೇಟೆ: ಬಂಡೀಪುರದ ಸಫಾರಿ ಜೋನ್‌ನಲ್ಲಿ ಪ್ರವಾಸಿಗರಿಗೆ ಮರಿಗಳ ಜೊತೆ ದರ್ಶನ ಕೊಡುತ್ತಿದ್ದ ತಾಯಿ ಹುಲಿಗೆ ಗಾಯಗಳಾಗಿದ್ದು, ಪ್ರಾಣಿಪ್ರಿಯರು ಆತಂಕಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದಲ್ಲಿ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಹುಲಿಯೊಂದು ಆಗಾಗ್ಗೆ ತನ್ನ ಮರಿಗಳೊಂದಿಗೆ ದರ್ಶನ ನೀಡುತ್ತಿತ್ತು.
ಹುಲಿ ಹಾಗೂ ಮರಿಹುಲಿಗಳನ್ನು ಕಂಡು ಪ್ರವಾಸಿಗರು ಫುಲ್‌ ಖುಷ್‌ ಆಗಿ, ಮೊಬೈಲ್‌ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು.

ಆದರೆ ಈ ಹುಲಿಗೆ ಈಗ ಬೇಟೆಯಾಡುವ ಸಂದರ್ಭದಲ್ಲಿ ಗಾಯಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಾಣಿಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಗಾಯಗೊಂಡಿರುವ ಹುಲಿಯ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಅಗತ್ಯವಿದ್ದರೇ ಚಿಕಿತ್ಸೆ ಕೊಡಲು ಅರಣ್ಯ ಇಲಾಖೆ ಸಜ್ಜಾಗಿದೆ.

Tags:
error: Content is protected !!