Mysore
17
few clouds

Social Media

ಬುಧವಾರ, 28 ಜನವರಿ 2026
Light
Dark

ಮೈಷುಗರ್‌ ಆವರಣದಲ್ಲೆ ಹೊಸ ಕಾರ್ಖಾನೆ

mysugar

ಮಂಡ್ಯ : ಈಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಆವರಣದಲ್ಲೇ ರಾಜ್ಯ ಸರ್ಕಾರ ಹೊಸ ಕಾರ್ಖಾನೆಯನ್ನು ನಿರ್ಮಿಸಲು ತೀರ್ಮಾನಿಸಿದೆ. ೫೯.೮೦ ಕೋಟಿ ರೂ. ವೆಚ್ಚದಲ್ಲಿ ೫ ಸಾವಿರ ಟಿಸಿಡಿ ಸಾಮರ್ಥ್ಯದ ಕಬ್ಬು ನುರಿಸುವ ಹೊಸ ಯಂತ್ರ, ೧೧೬ ಕೋಟಿ ರೂ. ವೆಚ್ಚದ ೮೦ ಕೆಎಲ್‌ಪಿಡಿ ಸಾಮರ್ಥ್ಯ ಕಾಕಂಬಿ ಆಧಾರಿತ ಎಥೆನಾಲ್ ಘಟಕವನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ ಅವರು, ಹೊಸ ಕಾರ್ಖಾನೆ ನಿರ್ಮಾಣ ಸಂಬಂಧ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿಯನ್ನು ಪಡೆಯಲಾಗಿದೆ. ವರದಿಯಲ್ಲಿರುವ ಮೂರು ಅಂಶಗಳಲ್ಲಿ ಕಬ್ಬು ನುರಿಸಲು ಹೊಸ ಯಂತ್ರ ಅಳವಡಿಕೆ, ಎಥೆನಾಲ್ ಘಟಕ ಸ್ಥಾಪನೆಗೆ ಅಗತ್ಯವಿರುವ ೧೭೫.೮೦ ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದ್ದು, ಇದರಲ್ಲಿ ೧೦೦ ಕೋಟಿ ರೂ. ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಒದಗಿಸಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ನಂತರ ಸಚಿವ ಸಂಪುಟದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಹೊಸ ಬಾಯ್ಲರ್ ಘಟಕ ಸ್ಥಾಪನೆಗೆ ೨೮೮ ಕೋಟಿ ರೂ. ಅಗತ್ಯವಿರುವುದರಿಂದ ಸದ್ಯಕ್ಕೆ ಆ ಪ್ರಸ್ತಾವನೆಯನ್ನು ಮುಂದೂಡಲಾಗಿದೆ. ಮುಂದಿನ ಹಂಗಾಮುಗಳಲ್ಲಿ ಕಬ್ಬಿನ ಲಭ್ಯತೆಯನ್ನು ಆಧರಿಸಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:
error: Content is protected !!