Mysore
14
scattered clouds

Social Media

ಗುರುವಾರ, 22 ಜನವರಿ 2026
Light
Dark

ಕೊಳ್ಳೇಗಾಲ: ಅಕ್ರಮ ಮದ್ಯ ಮಾರುತ್ತಿದ್ದ ಮನೆಗಳ ಮೇಲೆ ಪೊಲೀಸರ ದಾಳಿ

Liquor sale

ಕೊಳ್ಳೇಗಾಲ: ಅಕ್ರಮ ಮದ್ಯ ಮಾರಾಟ ಮಾರಾಟ ಮಾಡುತ್ತಿದ್ದ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 71 ಪೌಚ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲದ ಪಾಳ್ಯ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಳ್ಳೇಗಾಲ ಅಬಕಾರಿ ಸಬ್‌ ಇನ್ಸ್‌ಪೆಕ್ಟರ್‌ ಶ್ರೀಧರ್‌ ನೇತೃತ್ವದ ತಂಡ, ಮೂರು ಮನೆಗಳಲ್ಲಿ 71 ಪೌಚ್‌ ಮದ್ಯವನ್ನು ಜಪ್ತಿ ಮಾಡಿದೆ.

ಮದ್ಯ ದಾಸ್ತಾನು ಇಟ್ಟಿದ್ದ ಮನೆಯಕಮ್ಮ ವಿರುದ್ಧ ಕೇಸು ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಮೂರು ಪೌಚ್‌ ದಾಸ್ತಾನು ಇಟ್ಟಿದ್ದ ರಾಜೇಶ್ವರಿ ಹಾಗೂ ಎರಡು ಪೌಚ್‌ ದಾಸ್ತಾನು ಇಟ್ಟಿದ್ದ ಶಿವರುದ್ರಮ್ಮ ಎಂಬುವವರಿಗೆ ತಲಾ 1 ಸಾವಿರ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಈ ರೀತಿ ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!