Mysore
28
scattered clouds

Social Media

ಗುರುವಾರ, 23 ಏಪ್ರಿಲ 2026
Light
Dark

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿ ಮುಂದೆ ಸಾಕ್ಷಿದಾರನ ಸ್ಫೋಟಕ ಮಾಹಿತಿ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ನಾನು 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು. 2023ರ ಡಿಸೆಂಬರ್‌ನಲ್ಲಿ ತಮಿಳುನಾಡಿನಿಂದ ಆ ಗುಂಪು ನನ್ನನ್ನು ಕರೆತಂದಿತು. ಮೊದ ಮೊದಲು ಕೋರ್ಟ್‌ ಮುಂದೆ ಹೇಳಿಕೆ ನೀಡಲು ಭಯ ಆಗುತ್ತಿತ್ತು. ಬಳಿಕ ಧೈರ್ಯ ಬಂತು. ಹೀಗಾಗಿ ನಾನು ಇಲ್ಲಿಗೆ ಬಂದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಆ ಗುಂಪು ಬುರುಡೆ ತಂದು ಹೇಳಿದ ರೀತಿ ನಡೆದುಕೊಂಡೆ. ಪೊಲೀಸರ ಮುಂದೆ ಏನೇನು ಹೇಳಬೇಕು ಎಂಬುದನ್ನು ಮೂವರು ಪ್ರತಿನಿತ್ಯ ಹೇಳಿಕೊಡುತ್ತಿದ್ದರು. ಅದೇ ರೀತಿ ಪೊಲೀಸರ ಮುಂದೆ ಹೇಳಿದ್ದೇನೆ ಎಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಮಾಸ್ಕ್‌ ಮ್ಯಾನ್‌ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!