Mysore
22
broken clouds

Social Media

ಭಾನುವಾರ, 25 ಜನವರಿ 2026
Light
Dark

ಚಾಮುಂಡಿಬೆಟ್ಟದಲ್ಲಿ ದರ್ಶನ್‌ ಅಭಿಮಾನಿಗಳಿಂದ ವಿಶೇಷ ಪೂಜೆ

Special Pooja by Darshan Fans at Chamundi Hill

ಮೈಸೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಎದುರಾಗಿರುವ ಸಂಕಷ್ಟಗಳು ದೂರಾಗಲಿ ಎಂದು ಡಿಬಾಸ್‌ ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು.

ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕಿಡಿಗೇಡಿಗಳಿಂದ ನಡೆಯುತ್ತಿರುವ ಷಡ್ಯಂತ್ರಗಳು ಸಮಾನವಾಗಲಿ, ದರ್ಶನ್‌ಗೆ ಎದುರಾಗಿರುವ ಸಂಕಷ್ಟಗಳು ದೂರವಾಗಲಿ, ಚಾಮುಂಡೇಶ್ವರಿಯ ಆಶೀರ್ವಾದ ಸದಾ ಡಿ ಬಾಸ್ ಮೇಲಿರಲಿ ಎಂದು ಚಾಮುಂಡಿ ಬೆಟ್ಟದಲ್ಲಿ ದರ್ಶನ್‌ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದರ್ಶನ್ ಭಾವಚಿತ್ರ ಹಿಡಿದು ಸ್ಟ್ಯಾಂಡ್ ವಿತ್ ದರ್ಶನ್ ಎಂದು ಘೋಷಣೆ ಕೂಗಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು.

ಈ ವೇಳೆ ದರ್ಶನ್‌ ಅಭಿಮಾನಿಗಳಾದ ಹರೀಶ್ ನಾಯ್ಡು, ನಿತೀಶ್ ಗೌಡ, ದೀಪಕ್, ಮಹಾನ್ ಶ್ರೇಯಸ್, ರಾಕೇಶ್, ರಾಜೇಶ್, ಮಂಗಳ, ರಾಜೇಶ್ವರಿ, ರುಕ್ಮಿಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!