ಮೈಸೂರು : ತಾರಕ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ತಾರಕ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವುದರಿಂದ ಜಲಾಶಯವು ಗರಿಷ್ಟ ಮಟ್ಟ ತಲುಪುವ ಹಂತದಲ್ಲಿದೆ.
ಆದುದ್ದರಿಂದ ಜಲಾಶಯದಿಂದ ಯಾವುದೇ ಸಮಯದಲ್ಲಿಯಾದರೂ ಸರಿಯೇ ಕ್ರಸ್ಟ್ ಗೇಟುಗಳ ಮೂಲಕ ನೀರನ್ನು ಹೊರಬಿಡುವ ಸಂಭವ ಇರುವುದರಿಂದ ಸಾರ್ವಜನಿಕರು, ನದಿಯ ದಂಡೆಯ ಗ್ರಾಮದ ನಿವಾಸಿಗಳು ಹಾಗೂ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿರುವ ಆಸ್ತಿ ಪಾಸ್ತಿ, ಜನ-ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಎಚ್.ಡಿ.ಕೋಟೆ ಕಾವೇರಿ ನೀರಾವರಿ ನಿಗಮ ನಿಯಮಿತದ ತಾರಕ ನಾಲಾ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಟಶೇಖರ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





