Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ಜಿಎಸ್‌ಟಿ ಟ್ಯಾಕ್ಸ್‌ ನೋಟಿಸ್‌ಗೆ ಸಣ್ಣ ವರ್ತಕರ ಅಸಮಾಧಾನ: ಇಂದು, ನಾಳೆ ಹಾಲು ಮಾರಾಟ ಬಂದ್‌

Small traders protest

ಬೆಂಗಳೂರು: ಜಿಎಸ್‌ಟಿ ಟ್ಯಾಕ್ಸ್‌ ನೋಟಿಸ್‌ಗೆ ಅಸಮಾಧಾನ ಹೊರಹಾಕಿರುವ ಸಣ್ಣ ವರ್ತಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹಾಲು ಮಾರಾಟ ನಿಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ.

ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ಕೊಟ್ಟ ಬೆನ್ನಲ್ಲೇ ಇಂದಿನಿಂದ ಬೇಕರಿ ಕಾಂಡಿಮೆಂಟ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ.

ಹಲವು ಕಾಂಡಿಮೆಂಟ್‌, ಬೇಕರಿಗಳಲ್ಲಿ ಬೆಳಿಗ್ಗೆಯೇ ನೋ ಟೀ, ಕಾಫಿ, ಓನ್ಲಿ ಲೆಮನ್‌ ಟೀ, ಬ್ಲ್ಯಾಕ್‌ ಟೀ ಎನ್ನುವ ಬೋರ್ಡ್‌ಗಳನ್ನು ಹಾಕಲಾಗಿದೆ. ಇಂದು ನಾಳೆ ಟೀ, ಕಾಫಿ ಸಿಗಲ್ಲ, ಏನಿದ್ದರೂ ಲೆಮೆನ್‌ ಮತ್ತು ಬ್ಲ್ಯಾಕ್‌ ಟೀ ಸಿಗುತ್ತ ಎಂದು ಗ್ರಾಹಕರಿಗೆ ಬೋರ್ಡ್‌ ಮೂಲಕ ತಿಳಿಸಲಾಗಿದೆ.

ಇನ್ನು ಇಂದಿನಿಂದ ಹಾಲು, ಮೊಸರು ಮಾರುವುದಿಲ್ಲ. ಟ್ಯಾಕ್ಸ್‌ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!