Mysore
23
mist

Social Media

ಶನಿವಾರ, 03 ಜನವರಿ 2026
Light
Dark

ಸೋಮೇಶ್ವರಪುರ ಸರ್ಕಾರಿ ಶಾಲೆಯಲ್ಲಿ ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ

Someshwarpur Government School

ಮೈಸೂರು: ತಾಲ್ಲೂಕಿನ ಸೋಮೇಶ್ವರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಳೆದ 2009ರಲ್ಲಿ ಪಾಠ ಪ್ರವಚನ ಮಾಡಿದ್ದ ಶಿಕ್ಷಕರಾದ ಶಿವಕುಮಾರ್‌, ದೇವರಾಜು, ಕೃಷ್ಣಮೂರ್ತಿ, ಮೆಹಬೂಬ್‌ ಭಾಷ, ಸ್ಟೀವನ್‌, ಚಂದ್ರಶೇಖರ ಮೂರ್ತಿ, ನಂಜಯ್ಯ ಮತ್ತು ಶಿಕ್ಷಕಿಯರಾದ ಭಾರತಿ, ಪ್ರತಿಮ, ಮಧುರ, ನಾಗಲಾಂಬಿಕೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರ ನಡುವಿನ ಅವರ ಪಾಠ ಪ್ರವಚನಗಳು ಹಾಗು ಬೆಳೆದು ಬಂದ ಬಗೆಯ ಬಗ್ಗೆ ಮೆಲುಕು ಹಾಕುತ್ತ ಎಲ್ಲಾ ಗುರು ವೃಂದದವರಿಗೂ ಸನ್ಮಾನಿಸಿ ಅಭಿನಂದಿಸಲಾಯಿತು.

ಹಳೆಯ ವಿದ್ಯಾರ್ಥಿ ಶಶಾಂಕ ಹೆಚ್.ಎಸ್ ಮಾತನಾಡಿ, ಅಂದಿನ ನಮ್ಮ ಗುರುಗಳ ಶ್ರಮದ ಫಲವಾಗಿ ನಾವಿಂದು ಇಲ್ಲಿದ್ದೇವೆ. ಕಾಲ ಸರಿಯುತ್ತಾ ಹೋದಂತೆ ಎಲ್ಲರ ನಡುವೆ ಅಂತರಗಳು ಹೆಚ್ಚಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಮಾಗಮಕ್ಕೆ ಇಂತಹ ಕಾರ್ಯಕ್ರಮಗಳ ಆಯೋಜನೆ ಪ್ರಮುಖವಾಗುತ್ತದೆ. ನಮ್ಮ ಬಾಲ್ಯದ ನೆನಪುಗಳನ್ನು ಶಿಕ್ಷಕರೊಂದಿಗೆ ಮೆಲುಕು ಹಾಕಲು ಇದೊಂದು ಉತ್ತಮ ವೇದಿಕೆ ಎಂದು ಭಾವುಕರಾದರು

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಸಿದ್ದರಾಜು, ಮನು, ಶಶಾಂಕ, ರವಿಕುಮಾರ್, ಮಹೇಂದ್ರ, ಪ್ರವೀಣ್, ಅಶ್ವಿನಿ, ಅಮೃತ, ತುಳಸಿ ಜಗದಾಂಬ, ಪಲ್ಲವಿ, ಸಚಿನ್ ಬಿ, ಹುಚ್ಚನಾಯಕ , ಭಾಸ್ಕರ್, ಕಾರ್ತಿಕ್, ಅಕ್ಷಯ್ , ಗಿರೀಶ್, ಕುಮಾರ್ , ಸುನಿಲ್ ಭಾಗವಹಿಸಿದ್ದರು.

Tags:
error: Content is protected !!