Mysore
21
few clouds

Social Media

ಶನಿವಾರ, 24 ಜನವರಿ 2026
Light
Dark

ಸಿದ್ದರಾಮಯ್ಯಗೆ ಸ್ಥಿರತೆ ಹಾಗೂ ಸಾಮರ್ಥ್ಯ ಎರಡೂ ಇದೆ: ಸಚಿವ ಎಚ್.ಸಿ.ಮಹದೇವಪ್ಪ

Siddaramaiah has both stability and capability: Minister H.C. Mahadevappa

ಬೆಂಗಳೂರು: ಸಿದ್ದರಾಮಯ್ಯ 5 ವರ್ಷಕ್ಕೆ ಮುಖ್ಯಮಂತ್ರಿಯಾಗಿ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಸ್ಥಿರತೆ ಮತ್ತು ಸಾಮಥ್ರ್ಯ ಎರಡೂ ಇದೆ. ಅದರ ಹೊರತಾಗಿ ನಡೆಯುವ ಚರ್ಚೆಗಳ ಬಗ್ಗೆ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಈಗ ಯಾವುದೇ ಚರ್ಚೆಗಳು ಆಗಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಾಗಲೆಲ್ಲಾ ನಾವು ಹೋಗಿ ಭೇಟಿ ಮಾಡುತ್ತೇವೆ. ಅದರಲ್ಲಿ ಏನೂ ವಿಶೇಷ ಇರುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರು ರಾಜಕೀಯ ಜೀವನದಲ್ಲಿ 40 ವರ್ಷ ಕಳೆದಿದ್ದಾರೆ. ಆರಂಭದಿಂದಲೂ ನಾನು ಅವರ ಜೊತೆಯಲ್ಲಿದ್ದೇನೆ. ಎಂದೂ ಸ್ವಜನ ಪಕ್ಷಪಾತ ಮಾಡಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಚಾರಿತ್ರ್ಯ ಹರಣ ಮಾಡಿದ್ದವು. ಈಗ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಛೀಮಾರಿ ಹಾಕಿದೆ. ನ್ಯಾಯಾಲಯ ಹಾಗೂ ಸಂವಿಧಾನದ ಮೇಲಿನ ನಮ್ಮ ನಂಬಿಕೆ ಸ್ಥಿರವಾಗಿದೆ ಎಂದರು.

ಆರೋಪಗಳಿಂದಾಗಿ ಸಿದ್ದರಾಮಯ್ಯ ಹೆದರಿರಲಿಲ್ಲ. ತಪ್ಪೇ ಮಾಡಿಲ್ಲ ಎಂದ ಮೇಲೆ ಆತಂಕಗೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಅನಗತ್ಯವಾದ ಟೀಕೆಗಳಿಂದ ಸಿದ್ದರಾಮಯ್ಯನವರ ಪತ್ನಿ ಬಿ.ಎಂ.ಪಾರ್ವತಿಯವರು ಮಾನಸಿಕವಾಗಿ ನೊಂದಿದ್ದರು. ತಪ್ಪು ಮಾಡದಿದ್ದ ಅವರಿಗೆ ಈ ರೀತಿಯ ತೊಂದರೆಗಳಾಗಬಾರದಿತ್ತು ಎಂದು ಹೇಳಿದರು.

Tags:
error: Content is protected !!