Mysore
25
clear sky

Social Media

ಗುರುವಾರ, 29 ಜನವರಿ 2026
Light
Dark

ಜೆಸಿಬಿ ಆಪರೇಟರ್ ಶವ ಕರಿಕೆ ಹೊಳೆಯಲ್ಲಿ ಪತ್ತೆ

jcb operators dead body found in river

ಮಡಿಕೇರಿ: ತುಂಬಿ ಹರಿಯುತ್ತಿದ್ದ ಸೇತುವೆಯಲ್ಲಿ ಬೈಕ್ ದಾಟಿಸುವ ವೇಳೆ ನೀರಿನ ರಬಸಕ್ಕೆ ಜೆಸಿಬಿ ಆಪರೇಟರ್ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ೩ ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯದ ಬಳಿಕ ಮೃತದೇಹ ಕರಿಕೆಯ ಚಂಬೇರಿಯ ಬಳಿ ಕರಿಕೆ ಹೊಳೆಯಲ್ಲಿ ಪತ್ತೆಯಾಗಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ದುರ್ಗಪ್ಪ(೧೯) ಎಂಬ ಯುವಕನೇ ಮೃತ ಕಾರ್ಮಿಕ.

ಕೊಡಗು ಜಿಲ್ಲೆಯ ಗಡಿಭಾಗ ಕೇರಳ ರಾಜ್ಯಕ್ಕೆ ಸೇರಿದ ಮಂಞಡ್ಕ ಗ್ರಾಮದಲ್ಲಿ ಗೇರು ತೋಟದ ಕಾಮಗಾರಿಯಲ್ಲಿ ದುರ್ಗಪ್ಪ ತೊಡಗಿಸಿಕೊಂಡಿದ್ದ. ಜು.೧೭ರಂದು ಮಧ್ಯಾಹ್ನ ತಾವು ತಂಗಿದ್ದ ಕರಿಕೆಯ ತೋಟದ ಗ್ರಾಮದ ಮನೆಯಿಂದ ತಮಗೆ ಹಾಗೂ ಕೆಲಸಗಾರರಿಗೆ ಊಟ ತರಲೆಂದು ಬೈಕ್‌ನಲ್ಲಿ ಬರುತ್ತಿದ್ದ. ಈ ಸಂದರ್ಭ ಮಂಞಡ್ಕ ಸೇತುವೆಯಲ್ಲಿ ನಿಯಂತ್ರಣ ಕಳೆದುಕೊಂಡು ಬೈಕ್ ಸಹಿತ ನೀರಿನಲ್ಲಿ ಕೊಚ್ಚಿ ಹೋಗಿದ್ದ.

ಬಳಿಕ ಅನಿಲ್‌ಗಾಗಿ ಕೇರಳ ಅಗ್ನಿಶಾಮಕ, ಪೊಲೀಸ್, ಎನ್.ಡಿ.ಆರ್.ಎಫ್, ಸ್ಥಳೀಯರು ಮೂರು ದಿನಗಳಿಂದ ಹುಟುಕಾಟ ನಡೆಸಿದ್ದರು. ಇದೀಗ ಕರಿಕೆಹೊಳೆಯ ಚಂಬೇರಿ ಎಂಬಲ್ಲಿ ಅನಿಲ್ ಮೃತದೇಹ ಪತ್ತೆಯಾಗಿದೆ.
ಕಾಸರಗೋಡುವಿನ ರಾಜಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!