Mysore
28
broken clouds

Social Media

ಮಂಗಳವಾರ, 13 ಜನವರಿ 2026
Light
Dark

20 ವರ್ಷ ಕೋಮದಲ್ಲಿದ್ದ ಸೌದಿಯ ಪ್ರಿನ್ಸ್‌ ಇನ್ನಿಲ್ಲ

Sleeping Prince

ಸೌದಿ ಅರೆಬೀಯಾ : ಕಳೆದ 20 ವರ್ಷಗಳಿಂದ ಕೋಮದಲ್ಲಿದ್ದ ಸೌದಿ ಅರೆಬೀಯಾ ರಾಜಕುಮಾರ್ ಆಲ್‌ವಲೀದ್ ಬಿನ್ ಖಾಲೀದ್ ಬಿನ್ ತಲಾಲ್ ಆಲ್ ಸೌದ್ ನಿನ್ನೆ ನಿಧನರಾಗಿದ್ದಾರೆ. 20 ವರ್ಷಗಳಿಂದ ಕೋಮದಲ್ಲಿದ್ದ ಅವರನ್ನು ಸ್ವೀಪಿಂಗ್ ಪ್ರಿನ್ಸ್ ಎಂದೇ ಕರೆಯಲಾಗುತ್ತಿತ್ತು.

ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಖಲೀದ್ ಬಿಬ್ ತಲಾಲ್ ಅವರ ಮಗ ಬಿಲೆನೀಯರ್ ಪ್ರಿನ್ಸ್‌ ಆಲ್‌ವಲೀದ್ ಬಿನ್ ತಲಾಲ್ ಅವರ ಸೋದರ ಅಳಿಯ ವಲೀದ್ ಅವರು 1990 ಏಪ್ರಿಲ್ ನಲ್ಲಿ ಜನಿಸಿದ್ದರು. 2005 ರಲ್ಲಿ ಲಂಡನ್‌ನಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಆಗ ಅವರ ಮೆದುಳಿಗೆ ತೀವ್ರ ಗಾಯವಾಗಿ ಕೋಮಗೆ ಜಾರಿದ್ದರು.

ಸೌದಿ ಸರ್ಕಾರ ರಾಜಕುಮಾರನಿಗೆ ಚಿಕಿತ್ಸೆ ನೀಡಲು ಅಮೆರಿಕಾ ಮತ್ತು ಸ್ಪೇನ್‌ನಿಂದ ನುರಿತ ತಜ್ಞರನ್ನ ಕರೆಸಿತ್ತು. ಆದರೆ ಎಂದು ಪ್ರಜ್ಞೆ ಮರಳಿ ಬರಲೇ ಇಲ್ಲ. ದೇಹದಲ್ಲಿ ಚಲನೆ ಇತ್ತು. ಹೀಗಾಗಿ ಯಾವತ್ತಾದರೂ ಒಂದು ದಿನ ಏಳಬಹುವುದು ಎಂಬ ಆಸೆಯಲ್ಲಿ ಕುಟುಂಬದವರು ಇದ್ದರು.

ಆದರೆ ವೈದ್ಯರು ಅವರು ಎಂದೂ ಮೇಲೇಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಅವರ ತಂದೆ ಪ್ರಿನ್ಸ್ ಖಾಲಿದ್ ಮಾತ್ರ ಚಿಕಿತ್ಸೆ ನಿಲ್ಲಿಸಲು ನಿರಾಕರಿಸಿದರು. ಇದಾದ ನಂತರ ಅವರನ್ನು ರೀಯಾದ್ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಕೈ ಮತ್ತು ಕಣ್ಣು ರೆಪ್ಪೆಗಳು ಚಲನೆ ಇತ್ತು. ಆದರೆ ಒಂದು ದಿನ ಅವರು ಮರಳಿ ಬರಬಹುದೆಂಬ ಭರವಸೆಯನ್ನ ಜನರಿಗೆ ನೀಡಲಾಗಿತ್ತು. ಇದೀಗ ಅವರು ತನ್ನ 36 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಂತಿಮವಾಗಿ ರಾಜಕುಮಾರ ಖಾಲಿದ್ ಬಿನ್ ತಲಾಲ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮೂಲಕ ತಮ್ಮ ಮಗನ ಸಾವನ್ನು ದೃಢಪಡಿಸಿದರು. ಅವರು ಭಾವನಾತ್ಮಕ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ – ‘ ಅಲ್ಲಾಹುನ ಇಚ್ಛೆ ಮತ್ತು ಹಣೆಬರಹವನ್ನು ನಂಬಿ, ನಾವು ನಮ್ಮ ಮಗನ ಸಾವಿನ ಸುದ್ದಿ ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ ಎಂದು ಬರೆದಿದ್ದಾರೆ.

2005 ರಲ್ಲಿ ಲಂಡನ್‌ನ ಮಿಲಿಟರಿ ಅಕಾಡೆಮಿಯಲ್ಲಿ ಓದುತ್ತಿದ್ದಾಗ ಪ್ರಿನ್ಸ್ ಅಲ್ವಲೀದ್ ಗಂಭೀರ ರಸ್ತೆ ಅಪಘಾತದಲ್ಲಿ ಸಿಲುಕಿದ್ದರು. ಈ ಅಪಘಾತದಲ್ಲಿ ಅವರ ತಲೆಗೆ ತೀವ್ರ ಪೆಟ್ಟಾಯಿತು. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿರುವಾಗ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಯಿತು.

ಅವರ ತಂದೆ, ಪ್ರಿನ್ಸ್ ಖಾಲಿದ್ ಬಿನ್ ತಲಾಲ್, ಕಳೆದ ಎರಡು ದಶಕಗಳಲ್ಲಿ ತಮ್ಮ ಮಗನನ್ನು ನೋಡಿಕೊಳ್ಳುವಲ್ಲಿ ಯಾವುದೇ ಲೋಪ ಮಾಡಲಿಲ್ಲ. ಪ್ರತಿ ವರ್ಷ ರಂಜಾನ್, ಈದ್ ಮತ್ತು ಇತರ ಧಾರ್ಮಿಕ ಸಂದರ್ಭಗಳಲ್ಲಿ, ಅವರು ತಮ್ಮ ಮಗನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದರು.

ಅನೇಕ ಬಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಸಹ ಬರೆದರು. ಈ ವರ್ಷ, ಬಕ್ರೀದ್‌ನ ಮೂರನೇ ದಿನದಂದು , ಅವರು ತಮ್ಮ ಇತರ ಪುತ್ರರೊಂದಿಗೆ ಆಸ್ಪತ್ರೆಗೆ ಹೋಗಿ ಅಲ್ವಲೀದ್‌ಗಾಗಿ ಪ್ರಾರ್ಥಿಸಿದರು.

ಜುಲೈ 22 ರವರೆಗೆ ಅಲ್-ಫಖಾರಿಯಾದಲ್ಲಿರುವ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅವರ ಅರಮನೆಯಲ್ಲಿ ಸಂತಾಪ ಸೂಚಿಸಲಾಗುವುದು. ರಾಜಕುಮಾರ ಅಲ್ವಲೀದ್ ಅವರ ಸಾವು ಸೌದಿ ಅರೇಬಿಯಾದಾದ್ಯಂತ ಶೋಕ ಅಲೆಗಳನ್ನು ಉಂಟುಮಾಡಿದೆ. ಜೀವನ ಮತ್ತು ಮರಣಕ್ಕಾಗಿ ರಾಜಕುಮಾರನ ದೀರ್ಘ ಹೋರಾಟವು ಪ್ರಪಂಚದಾದ್ಯಂತ ಜನರನ್ನು ಭಾವುಕರಾಗಿಸಿದೆ. ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.

Tags:
error: Content is protected !!