ಮಡಿಕೇರಿ : ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್ ಕಟ್ ಆಗಿ ಗುಡ್ಡಕ್ಕೆ ಗುದ್ದಿದ ಘಟನೆ ಇಲ್ಲಿನ ಸಮೀಪದ ಮೇಕೇರಿಯಲ್ಲಿ ಶನಿವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಕುಟ್ಟದಿಂದ ಮಡಿಕೇರಿಗೆ ಬರುತ್ತಿದ್ದ ಸಾರಿಗೆ ಬಸ್ ನ ಸ್ಟೇರಿಂಗ್ ಏಕಾಏಕಿ ಕಟ್ ಆಗಿದೆ. ಬಸ್ ನಲ್ಲಿದ್ದ 40 ಪ್ರಯಾಣಿಕರಲ್ಲಿ 14 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಿಳೆಯೊಬ್ಬರ ತಲೆಗೆ ಗಂಭೀರ ಪೆಟ್ಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಸ್ ಚಲಿಸುತ್ತಿದ್ದ ರಸ್ತೆಯ ಎಡಭಾಗದಲ್ಲಿ ನೂರಾರು ಅಡಿ ಆಳದ ಪ್ರಪಾತವಿದ್ದು, ಬಲಭಾಗದಲ್ಲಿದ್ದ ಬೆಟ್ಟಕ್ಕೆ(ಗುಡ್ಡ) ಗುದ್ದಿ ನಿಂತಿದೆ. ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತವೊಂದು ತಪ್ಪಿದೆ. ಗಾಯಾಳುಗಳು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





