Mysore
29
few clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಬಿಗ್‌ ಶಾಕ್‌ ನೀಡಿದ ಕಾರ್ಮಿಕ ಇಲಾಖೆ

big shocking for ksrtc transport unions

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಆಗಸ್ಟ್.‌5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ಸಂಘಟನೆಗಳಿಗೆ ಕಾರ್ಮಿಕ ಇಲಾಖೆ ಬಿಗ್‌ ಶಾಕ್‌ ನೀಡಿದೆ.

ಪ್ರತಿಭಟನೆ ನಿಷೇಧಿಸಿ ಕಾರ್ಮಿಕ ಇಲಾಕೆ ಎಸ್ಮಾ ಜಾರಿ ಮಾಡಿದ್ದು, ಮುಷ್ಕರ ನಡೆಸದಂತೆ ನೌಕರರಿಗೆ ತಾಕೀತು ಮಾಡಲಾಗಿದೆ. ಆಗಸ್ಟ್.‌5ರಂದು ಬಸ್‌ಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಂಘಟನೆಗಳು ಮುಂದಾಗಿದ್ದವು. ಜನಸಾಮಾನ್ಯರಿಗೆ ಸಾರಿಗೆ ಸೇವೆ ಒದಗಿಸುವುದು ಅಗತ್ಯ ಸೇವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013ರ ಅಡಿ ಎಸ್ಮಾ ಜಾರಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗದಂತೆ ಎಸ್ಮಾ ಜಾರಿಗೊಳಿಸಲಾಗಿದೆ. ಜುಲೈ.1ರಿಂದ ಡಿಸೆಂಬರ್.‌31ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಅಧಿಸೂಚನೆಯ ಪ್ರತಿಯನ್ನು ಎಲ್ಲಾ ಘಟಕ, ಕಾರ್ಯಾಗಾರ, ಕಚೇರಿ ಮತ್ತು ಬಸ್‌ ನಿಲ್ದಾಣಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಆ ಮೂಲಕ ಈ ವಿಚಾರವನ್ನು ಎಲ್ಲಾ ನೌಕರರ ಗಮನಕ್ಕೆ ತರಲಾಗುವುದು ಎಂದು ಇಲಾಖೆ ತಿಳಿಸಿದೆ.

Tags:
error: Content is protected !!