Mysore
18
few clouds

Social Media

ಬುಧವಾರ, 07 ಜನವರಿ 2026
Light
Dark

ಆಗಸ್ಟ್ ತಿಂಗಳಿನಲ್ಲಿ ಪ್ರಧಾನಿ ಮೋದಿ ಚೀನಾಗೆ ಭೇಟಿ.?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಸ್ಟ್ ತಿಂಗಳಲ್ಲಿ ಚೀನಾಗೆ ತೆರಳುವ ಸಾಧ್ಯತೆಗಳಿವೆ.

ಚೀನಾದಲ್ಲಿ ಎಸ್‍ಸಿಒ ಸಭೆಯ ಆಗಸ್ಟ್.31ರಿಂದ ಸೆಪ್ಟೆಂಬರ್.1ರವರೆಗೆ ಅಂದರೆ ಎರಡು ದಿನಗಳ ಕಾಲ ನಡೆಯಲಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲೇ ಮೋದಿ ಚೀನಾ ಪ್ರವಾಸ ವಿಶ್ವದ ಗಮನ ಸೆಳೆದಿದೆ.

ವಿದೇಶಾಂಗ ಸಚಿವ ಜೈಶಂಕರ್ ಅವರ ಚೀನಾ ಭೇಟಿಯ ನಂತರ, ಪ್ರಧಾನಿ ಮೋದಿ ಅವರು ಜಪಾನ್ ಮತ್ತು ನಂತರ ಶೃಂಗಸಭೆಗಾಗಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

2020ರ ಗಾಲ್ವಾನ್ ಕಣಿವೆ ಘರ್ಷಣೆ ಬಳಿಕ ಕಹಿಯಾಗಿದ್ದ ಭಾರತ-ಚೀನಾ ನಡುವಿನ ಸಂಬಂಧ ಇದೀಗ ಸಿಹಿಯಾಗಲು ಪ್ರಾರಂಭವಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಚೀನಾ ಭೇಟಿಯ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ ಅಂತ್ಯದಲ್ಲಿ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‍ಗೆ ಭೇಟಿ ನೀಡಬಹುದು. ಇದರ ನಂತರ, ಪ್ರಧಾನಿ ಶಾಂಘೈ ಸಹಕಾರ ಸಂಸ್ಥೆನಲ್ಲಿ ಭಾಗವಹಿಸಲು ಚೀನಾಕ್ಕೂ ಭೇಟಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಮೋದಿ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷರು ಸೇರಿದಂತೆ ಇತರ ಎಸ್‍ಸಿಒ ನಾಯಕರನ್ನು ಸಹ ಭೇಟಿಯಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!