Mysore
27
broken clouds

Social Media

ಭಾನುವಾರ, 25 ಜನವರಿ 2026
Light
Dark

ಹುಣಸೂರು | ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ: ವಿಡಿಯೋ ವೈರಲ್‌

tiger

ಹುಣಸೂರು: ನಾಗರಹೊಳೆ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್‌ನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ ನೀಡಿದ್ದು, ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿರಲಿಲ್ಲ, ಆದರೆ ಮಂಗಳವಾರ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಆನೆ, ಕಾಡೆಮ್ಮೆ, ಜಿಂಕೆ, ಕಡವೆ ದರ್ಶನವಾಗಿತ್ತು. ಆದರೆ ಹುಲಿ ಕಾಣಿಸಿಕೊಳ್ಳದೆ ಇದ್ದಿದ್ದರಿಂದ ನಿರಾಸೆಯಿಂದ ವಾಪಸ್ ಆಗುತ್ತಿದ್ದರು. ಆದರೆ ಕುಟ್ಟ-ಹುಣಸೂರು ಮಾರ್ಗ ಮಧ್ಯದ ಮುಖ್ಯರಸ್ತೆಯಲ್ಲಿ ಹೆಣ್ಣು ಹುಲಿ ಪ್ರವಾಸಿಗರಿಗೆ ದರ್ಶನ ನೀಡಿದೆ. ಇದರಿಂದ ಪ್ರವಾಸಿಗರು ತೀವ್ರ ಸಂತಸ ವ್ಯಕ್ತಪಡಿಸಿದ್ದು, ಹುಲಿಯ ದೃಶ್ಯವನ್ನು ತಮ್ಮ ತಮ್ಮ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ.

Tags:
error: Content is protected !!