Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ಕೇರಳದಲ್ಲಿ ಶಂಕಿತ ನಿಫಾ ವೈರಸ್‌ನಿಂದ ಮತ್ತೊಬ್ಬರು ಸಾವು: ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

Nipah virus

ಪಾಲಕ್ಕಾಡ್:‌ ಜುಲೈ.12ರಂದು ಜಿಲ್ಲೆಯ 57 ವರ್ಷದ ವ್ಯಕ್ತಿಯೋರ್ವ ಶಂಕಿತ ನಿಫಾ ವೈರಸ್‌ನಿಂದ ಸಾವನ್ನಪ್ಪಿದ್ದಾನೆ. ಇದಾದ ನಂತರವೂ ಕೇರಳದಲ್ಲಿ ನಿಫಾ ವೈರಸ್‌ನಿಂದ ಎರಡನೇ ಶಂಕಿತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ನಿಫಾಗೆ ಧನಾತ್ಮಕ ಪರೀಕ್ಷೆ ವರದಿ ಬಂದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ದೃಢಪಡಿಸಿದ್ದಾರೆ.

ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ ಅಂತಿಮ ದೃಢೀಕರಣಕ್ಕಾಗಿ ಕಾಯಲಾಗುತ್ತಿದ್ದು, ಶಂಕಿತ ನಿಫಾ ವೈರಸ್‌ನಿಂದ ಮೃತಪಟ್ಟ ಮೊದಲನೆಯವರು ಮಲಪ್ಪುರಂ ಮೂಲದವರಾಗಿದ್ದಾರೆ.

ಹೊಸ ಶಂಕಿತ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರವು ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕ್ಷೇತ್ರ ಕಣ್ಗಾವಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಮೃತರೊಂದಿಗೆ ಸಂಪರ್ಕಕ್ಕೆ ಬಂದ 46 ವ್ಯಕ್ತಿಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದ್ದು, ರೋಗಿಯ ಚಲನವಲನಗಳನ್ನು ಪತ್ತೆಹಚ್ಚಲು ಸಿಸಿ ಟಿವಿ ದೃಶ್ಯಾವಳಿ ಹಾಗೂ ಮೊಬೈಲ್‌ ಟವರ್‌ ಡೇಟಾವನ್ನು ಬಳಸಲಾಗಿದೆ.

ಪಾಲಕ್ಕಾಡ್‌, ಮಲಪ್ಪುರಂ, ಕೋಝಿಕ್ಕೋಡ್‌, ಕಣ್ಣೂರು, ವಯನಾಡು ಮತ್ತು ತ್ರಿಶೂರ್‌ ಜಿಲ್ಲೆಗಳಾದ್ಯಂತ ಆಸ್ಪತ್ರೆಗಳನ್ನು ನಿಫಾ ಸೋಂಕಿತರ ಚಿಕಿತ್ಸೆಗೆ ಸಜ್ಜುಗೊಳಿಸಲಾಗಿದೆ.

Tags:
error: Content is protected !!