Mysore
23
mist

Social Media

ಶುಕ್ರವಾರ, 02 ಜನವರಿ 2026
Light
Dark

ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿರುವ ಶುಭಾಂಶು ಶುಕ್ಲಾ

Shubanshu Shukla in space experiment Update

ನವದೆಹಲಿ: ಗಗನಯಾನ ಭಾಗವಾದ ಆಕ್ಸಿಯಮ್‌ 4 ಬಾಹ್ಯಾಕಾಶ ಪ್ರಯೋಗದ ಎಲ್ಲಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಶುಭಾಂಶು ಶುಕ್ಲಾ ಭೂಮಿಗೆ ಮರಳಲಿದ್ದಾರೆ.

ನಾಳೆ ಸಂಜೆ 4.35ಕ್ಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ ಡಾಕಿಂಗ್‌ ಪ್ರಕ್ರಿಯೆ ಆರಂಭವಾಗಲಿದ್ದು, ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ನಾಳೆ ಮಧ್ಯಾಹ್ನ 2.25ಕ್ಕೆ ಡ್ರ್ಯಾಗನ್‌ಗೆ ಪ್ರವೇಶಿಸಲಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಗನಯಾತ್ರಿಗಳು ಕ್ಯಾಲಿಪೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ.

ಜೂನ್.‌22ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರ ಮತ್ತು ಡ್ರ್ಯಾಗನ್‌ ಬಾಹ್ಯಾಕಾಶ ನೌಕೆ ಅಂತರಾಷ್ಟ್ರೀಯ ಸ್ಪಾದಲ್ಲಿ ಡಾಕ್‌ ಮಾಡಲಾಗಿತ್ತು. ಶುಕ್ಲಾ ಜೊತೆ ಇತರೆ ಮೂವರು ಸಿಬ್ಬಂದಿಯಾದ ಪೆಗ್ಗಿ ವಿಟ್ಸನ್‌, ಸ್ಲಾವೋಸ್ಜ್‌ ಉಜ್ನಾನ್ಸ್ಕಿ-ವಿಸಿಯೆವ್ಸ್ಕಿ ಮತ್ತು ಟಿಬೋರ್ಕಾಫು ಭೂಮಿಗೆ ವಾಪಸ್‌ ಆಗಲಿದ್ದಾರೆ.

Tags:
error: Content is protected !!