Mysore
19
broken clouds

Social Media

ಸೋಮವಾರ, 26 ಜನವರಿ 2026
Light
Dark

ರಾಜ್ಯಸಭೆಗೆ ನಾಲ್ವರನ್ನು ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

droupadi murmu nominates ujjwal nikam harsh vardhan shringla meenakshi jain and sadanandan master to rajya sabha

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ಸಂವಿಧಾನದ ವಿಧಿ 80(1)(ಎ)ಯಿಂದ ನೀಡಲಾದ ಅಧಿಕಾರಿಗಳ ಅಡಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಲ್ವರು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದ ಉಳಿದಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ನಾಮನಿರ್ದೇಶನಗಳನ್ನು ಮಾಡಲಾಗಿದೆ. ಉಜ್ವಲ್‌ ದೇವರಾವ್‌ ನಿಕಮ್‌, ಸಿ ಸದಾನಂದ ಮಾಸ್ಟರ್‌, ಹರ್ಷವರ್ಧನ್‌ ಶ್ರಿಂಗ್ಲಾ, ಮೀನಾಕ್ಷಿ ಜೈನ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಉಜ್ವಲ್‌ ದೇವರಾಮ್‌ ನಿಕಮ್:‌ ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ಹಲವಾರು ಉನ್ನತ ಮಟ್ಟದ ಕ್ರಿಮಿನಲ್‌ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾದ ಪ್ರಸಿದ್ಧ ಪಬ್ಲಿಕ್‌ ಪ್ರಾಸಿಕ್ಯೂಟರ್‌.

ಸಿ.ಸದಾನಂದ ಮಾಸ್ಟರ್:‌ ದಶಕಗಳ ತಳಮಟ್ಟದ ಅನುಭವ ಹೊಂದಿರುವ ಕೇರಳದ ಗೌರವಾನ್ವಿತ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ.

ಹರ್ಷವರ್ಧನ್‌ ಶ್ರಿಂಗ್ಲಾ: ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈ ಹಿಂದೆ ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದರು.

ಮೀನಾಕ್ಷಿ ಜೈನ್:‌ ಇವರು ಇತಿಹಾಸಕಾರರು ಹಾಗೂ ಶಿಕ್ಷಣ ತಜ್ಞೆಯಾಗಿದ್ದು, ಭಾರತೀಯ ಇತಿಹಾಸ ಮತ್ತು ನಾಗರಿಕತೆಯ ಕುರಿತಾದ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ.

ಹಿಂದಿನ ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದಾಗಿ ಖಾಲಿ ಸ್ಥಾನಗಳು ಬೀಳುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ.

Tags:
error: Content is protected !!