Mysore
21
clear sky

Social Media

ಶನಿವಾರ, 28 ಫೆಬ್ರವರಿ 2026
Light
Dark

ನವ ವಿವಾಹಿತೆ ವೈದ್ಯೆಗೆ ವರದಕ್ಷಿಣೆ ಕಿರುಕುಳ, ಗರ್ಭಪಾತ : ಐವರ ವಿರುದ್ಧ ದೂರು

Mandya: Police raid prostitution ring: Two women rescued

ಮೈಸೂರು : ವೈದ್ಯೆಗೆ ವರದಕ್ಷಿಣೆ ಕಿರುಕುಳ ನೀಡಿ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ಆಕೆಯ ಪತಿ ಹಾಗೂ ಕುಟುಂಬದ ಐವರ ವಿರುದ್ಧ ದೂರು ದಾಖಲಾಗಿದೆ.

ನಗರದ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ನವ ವಿವಾಹಿತೆ ನವ್ಯಾ, ಪತಿ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಎಫ್. ಐ.ಆರ್ ದಾಖಲಿಸಿದ್ದಾರೆ.

ಬಿಎಎಂಎಸ್ ವ್ಯಾಸಂಗ ಮಾಡಿ ವೈದ್ಯೆ ಆಗಿರುವ ನವ್ಯಾರನ್ನ ಮೈಸೂರಿನ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮಹದೇವ್ ಸುಮಾರು 80 ಲಕ್ಷ ಖರ್ಚು ಮಾಡಿ ಮಗಳು ನವ್ಯಾಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಇದೀಗ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹದೇವ್ ದೂರು ನೀಡಿದ್ದಾರೆ.

ನನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ನನ್ನ ಗಂಡ ಬೆದರಿಸಿ ನನ್ನ ಕುಟುಂಬದವರನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಬೇಕು ನನ್ನ ಗಂಡನ ಕುಟುಂಬಕ್ಕೆ ಶಿಕ್ಷೆ ಆಗಬೇಕು ಎಂದು ಸಂತ್ರಸ್ತೆ ನವ್ಯ ಆಗ್ರಹಿಸಿದ್ದಾರೆ.

Tags:
error: Content is protected !!