Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಸಿದ್ದಾಪುರದ ರಾಶಿ ರಾಶಿ ಕಸಕ್ಕೆ ಮುಕ್ತಿ ಯಾವಾಗ?

When clear Siddapur garbage

ಸಿದ್ದಾಪುರ : ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿ ಇರುವ ಇಲ್ಲಿನ ಗ್ರಾಮ ಪಂಚಾಯಿತಿ ಎರಡು ದಶಕಗಳಿಂದ ಕಸ ವಿಲೇವಾರಿಗೆ ಜಾಗವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದು, ಜನವಸತಿ ಪ್ರದೇಶದಲ್ಲಿ ಕಸವಿಲೇವಾರಿ ಮಾಡುತ್ತಿರುವುದ ರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಕಸ ವಿಲೇವಾರಿ ಸಮರ್ಪಕವಾದಲ್ಲಿ ಮಾತ್ರ ಆ ಪ್ರದೇಶ ಸ್ವಚ್ಛವಾಗಿರಲು ಸಾಧ್ಯ. ಆದರೆ, ಸಿದ್ದಾಪುರ ಗ್ರಾ. ಪಂ. ಕಳೆದ ೨ ದಶಕಗಳಿಂದ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಜಾಗದ ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಪಟ್ಟಣದಲ್ಲಿ ಕಸದ ರಾಶಿಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹಲವು ಕಡೆ ಕಸ ತಂದು ಸುರಿಯಲಾಗುತ್ತಿದ್ದು, ಸಮರ್ಪಕವಾಗಿ ವಿಲೇವಾರಿಯಾಗದೆ ಸಮಸ್ಯೆ ಎದುರಿಸುವಂತಾಗಿದೆ.

ಇದೀಗ ಸಿದ್ದಾಪುರ ಸಂತೆ ಮಾರುಕಟ್ಟೆಯ ಸರ್ಕಾರಿ ಪ್ರಾಥ ಮಿಕ ಶಾಲೆಯ ಅನತಿ ದೂರದಲ್ಲಿ ಗ್ರಾಮ ಪಂಚಾಯಿತಿ ಕಸ ತಂದು ಸುರಿಯುತ್ತಿದ್ದು, ಇಡೀ ವಾತಾವರಣವೇ ಗಬ್ಬು ನಾರುತ್ತಿದೆ. ಅಲ್ಲದೆ, ಸೊಳ್ಳೆ, ನೊಣ, ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ.

ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಭಾಗಗಳಲ್ಲಿ ಕಸ ಸಂಗ್ರಹಿಸಲು ಟ್ರಾಕ್ಟರ್ ಬಾರದೆ ಇರುವುದರಿಂದ ಕಸದ ಸಮಸ್ಯೆ ಹೆಚ್ಚುತ್ತಿದೆ. ಆಗೊಮ್ಮೆ ಈಗೊಮ್ಮೆ ಬಂದರೂ ಮನೆಯಲ್ಲಿ ಜನ ಇಲ್ಲದೆ ಇರುವುದರಿಂದ ಕಸ ಸಂಗ್ರಹ ಸರಿಯಾಗಿ ಆಗುತ್ತಿಲ್ಲ.

ಮಳೆ ಕೂಡ ಹೆಚ್ಚುತ್ತಿರುವುದರಿಂದ ಕಸ ವಿಲೇವಾರಿ ಸಮರ್ಪಕವಾಗಿ ಆಗದೆ ರೋಗ ರುಜಿನ ಹರಡುವ ಭೀತಿ ಎದುರಾಗಿದೆ.

ಈ ಹಿಂದೆ ಶಾಸಕರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಕಸ ವಿಲೇವಾರಿ ವಿಚಾರದ ಬಗ್ಗೆ ಚರ್ಚೆ ನಡೆದು ಶಾಸಕರೇ ಖುದ್ದು ಮಾರುಕಟ್ಟೆ ಪ್ರಾಂಗಣ ಪರಿಶೀಲಿಸಿ ೨೦ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿಸುವಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಸೂಚಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮಾತ್ರ ಕಸವನ್ನು ಖಾಲಿ ಮಾಡಿದ್ದು, ನಂತರ ಮತ್ತೆ ಇದೇ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಕಸ ಸುರಿಯುತ್ತಿರುವುದಾಗಿ ಸ್ಥಳಿಯರು ಆರೋಪಿಸಿದ್ದಾರೆ.

ಕಸ ಸಂಗ್ರಹಕ್ಕೆ ಹಣ ಸಂಗ್ರಹ:- ಕಸ ವಿಲೇವಾರಿ ಮಾಡಲು ವರ್ತಕರಿಂದಲೇ ಗ್ರಾ. ಪಂ. ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡಲು ವರ್ತಕರಿಂದ ೧೦೦ರಿಂದ ೨೫೦ ರೂ. ಸಂಗ್ರಹಿಸುವ ವಿಚಾರವಾಗಿ ಈಗಾಗಲೇ ವರ್ತಕರ ಸಂಘದ ಸಭೆ ಕರೆದು ತೀರ್ಮಾನಿಸಲಾ ಗಿದೆ. ಅದರಂತೆ ಪಟ್ಟಣದಲ್ಲಿ ಕಸ ಸಂಗ್ರಹ ಮಾಡಲಾಗುತ್ತಿ ದ್ದರೂ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಅಲ್ಲಲ್ಲಿ ಮತ್ತೆ ಕಸದ ರಾಶಿ ಗೋಚರಿಸುತ್ತಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅದರ ಸುತ್ತಲೂ ಕಸ ಸುರಿಯಲಾಗಿದೆ. ಇತ್ತ ಕಟ್ಟಡಗಳನ್ನೂ ಸಮರ್ಪಕವಾಗಿ ಉಪಯೋಗಿಸುತ್ತಿಲ್ಲ, ಮತ್ತೊಂದೆಡೆ ಕಸ ವಿಲೇವಾರಿಯೂ ಆಗುತ್ತಿಲ್ಲ.
ಇದರಿಂದ ಪಂಚಾಯಿತಿಯ ಆದಾಯ ಕೂಡ ಕುಂಠಿತವಾಗಿದೆ. ಕಸ ಸಮಸ್ಯೆ ಬಗೆಹರಿಸಲು ಗ್ರಾ. ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು. -ಸಮ್ಮದ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ

ಕಸ ಸುರಿಯುತ್ತಿರುವ ಸ್ಥಳದ ಸಮೀಪದಲ್ಲೇ ಪ್ರಾಥಮಿಕ ಶಾಲೆ ಇದೆ. ಮಕ್ಕಳು, ವಯೋವೃದ್ಧರು ಈ ರಸ್ತೆಯಲ್ಲೇ ಓಡಾಡುತ್ತಾರೆ. ಇದರೊಂದಿಗೆ ಕಸ ಸಂಗ್ರಹಿಸಲು ವಾಹನ ಕೂಡ ಸರಿಯಾದ ಸಮಯಕ್ಕೆ ಬಾರದೆ ಸಮಸ್ಯೆಯಾಗಿದೆ. ಕಸ ವಿಲೇವಾರಿ ಸಮರ್ಪಕವಾಗಿ ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. – ಫಯಾಜ್ ಅಹಮದ್, ಸ್ಥಳೀಯ ನಿವಾಸಿ, ಸಿದ್ದಾಪುರ

ಕಸ ಸಂಗ್ರಹಿಸುವ ವಾಹನ ಕೆಟ್ಟು ನಿಂತಿರುವುದರಿಂದ ಸಮಸ್ಯೆಯಾಗುತ್ತಿದೆ. ಈಗಾಗಲೇ ವಾಹನ ದುರಸ್ತಿಗೆ ಕ್ರಮಕೈಗೊಳ್ಳಲಾಗಿದ್ದು, ಗ್ಯಾರೇಜ್ ನಲ್ಲಿ ನಿಲ್ಲಿಸಲಾಗಿದೆ. ವಾಹನ ದುರಸ್ತಿಪಡಿಸಿದ ತಕ್ಷಣ ಕಸ ಸಂಗ್ರಹಿಸಲು ಕಳುಹಿಸಲಾಗುವುದು. ನಿವಾಸಿಗಳು ಹಸಿ ಮತ್ತು ಒಣ ಕಸ ಬೇರ್ಪಡಿಸಿ ವಾಹನಕ್ಕೆ ನೀಡಿದಲ್ಲಿ ಕಸ ವಿಲೇವಾರಿ ಸುಲಭವಾಗಲಿದೆ. ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. – ಪ್ರೇಮಾ ಗೋಪಾಲ್, ಗ್ರಾ. ಪಂ. ಅಧ್ಯಕ್ಷರು, ಸಿದ್ದಾಪುರ

– ಕೃಷ್ಣ ಸಿದ್ದಾಪುರ

Tags:
error: Content is protected !!