Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

5 ವರ್ಷಗಳ ಕಾಲ ನಾನೇ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛಾರ

siddaramaiah reaction on mlc ravikumar statement

ನವದೆಹಲಿ: 5 ವರ್ಷಗಳ ಕಾಲ ನಾನೇ ಸಿಎಂ. ಪವರ್‌ ಶೇರಿಂಗ್‌ ಮಾತೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು, ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಐದು ವರ್ಷಗಳ ಕಾಲ ನಾನೇ ಸಿಎಂ ಆಗಿ ಇರುತ್ತೇನೆ. ಯಾವುದೇ ಪವರ್‌ ಶೇರಿಂಗ್‌ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಬದಲಾಗಲಿ ಎಂಬ ಹೇಳಿಕೆಯನ್ನೂ ನೀಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರುವಾಗ ಸಿಎಂ ಬದಲಾವಣೆ ಚರ್ಚೆ ಅನವಶ್ಯಕ ಎಂದು ಡಿಕೆಶಿ ಕೂಡ ಹೇಳಿದ್ದಾರೆ ಎಂದರು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಕೆಲ ಶಾಸಕರು ಡಿಕೆಶಿ ಅವರನ್ನು ಬೆಂಬಲಿಸುತ್ತಾರೆ. ಹೆಚ್ಚಿನ ಶಾಸಕರು ಡಿಕೆಶಿ ಅವರನ್ನು ಬೆಂಬಲಿಸಲ್ಲ. ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಹೈಕಮಾಂಡ್‌ ಏನು ನಿರ್ಧಾರ ಕೈಗೊಳ್ಳುವುದೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನಾನಾಗಲಿ, ಡಿಕೆಶಿ ಆಗಲಿ ಹೈಕಮಾಂಡ್‌ ಹೇಳಿದ್ದನ್ನು ಪಾಲಿಸಲೇಬೇಕಿದೆ ಎಂದರು.

Tags:
error: Content is protected !!