Mysore
35
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಮೈಸೂರು: ಹಠಾತ್ ಹೃದಯಾಘಾತದಿಂದ ಯುವಕ‌ ಸಾವು

Young man dies of sudden heart attack at Mysore

ಮೈಸೂರು: ರಾಜ್ಯದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ. 28 ವರ್ಷದ ದರ್ಶನ್ ಚೌದ್ರಿ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.

ಮೈಸೂರಿನ ಚಾಮರಾಜ ಮೊಹಲ್ಲಾ ನಿವಾಸಿ ದರ್ಶನ್ ಚೌಧರಿ ನಗರದ ದೇವರಾಜಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಇಟ್ಟು ಕೊಂಡಿದ್ದನು.

ಕಳೆದ ತಡರಾತ್ರಿ ದರ್ಶನ್‌ಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮದ್ಯೆಯೇ ದರ್ಶನ್ ಚೌದ್ರಿ ಮೃತಪಟ್ಟಿದ್ದಾನೆ.

Tags:
error: Content is protected !!