ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಅರಣ್ಯ ಪ್ರದೇಶದ ದೊಡ್ಡ ಹಳ್ಳ ಗಸ್ತು ಸಮೀಪ ಹೆಣ್ಣಾನೆಯೊಂದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸುಮಾರು 35 ವರ್ಷದ ಹೆಣ್ಣಾನೆ ಎಂದು ಅಂದಾಜಿಸಲಾಗಿದೆ. ಆನೆಯ ಸ್ವಾಭಾವಿಕ ಕಾರಣದಿಂದಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ. ತನಿಖೆ ಕೈಗೊಂಡಿದ್ದಾರೆ.
ಹೆಣ್ಣಾನೇ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಮಲೆಮಾದೇಶ್ವರ ಬೆಟ್ಟ ವ್ಯಾಪ್ತಿಯ ಎಸಿಎಫ್ ಸ್ವಪ್ಟಿಲ್ ಮನೋಹರ್ ಅಹಿರೆ, ವಲಯ ಅರಣ್ಯಾಧಿಕಾರಿ ಉಮಾಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ವೈದ್ಯಾಧಿಕಾರಿ ಡಾ. ಆದರ್ಶ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು.





