Mysore
28
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗಲು ಬೆಂಬಲ ನೀಡುತ್ತೇನೆ: ಶಾಸಕ ಸಿ.ಪಿ. ಯೋಗೇಶ್ವರ್‌

C P Yogeshwar

ರಾಮನಗರ: ನನಗೆ ಮಂತ್ರಿ ಸ್ಥಾನ ಬೇಡ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್‌ ಹೇಳಿದ್ದಾರೆ.

ಈ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರದ ಒಡಂಬಡಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್‌ ಸರ್ಕಾರದಲ್ಲಿ ಶಾಸಕನಾಗಿ ಆರು ತಿಂಗಳಾಗಿದೆ. ಕಾಂಗ್ರೆಸ್‌ನಲ್ಲಿ ನಾನು ಬಹಳ ಸಕ್ರಿಯನಾಗಿ ಓಡಾಡುತ್ತಿಲ್ಲ. ನನಗೆ ಮಂತ್ರಿ ಸ್ಥಾನದ ಆಸಕ್ತಿಯಿಲ್ಲ. ಆದರೆ ಮೊದಲು ಡಿಕೆಶಿಗೆ ಸಿಎಂ ಸ್ಥಾನ ಸಿಗಲು ಬೆಂಬಲ ನೀಡುತ್ತೇನೆ ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಡಿಕೆಶಿ ಸಿಎಂ ಆಗಲಿ ಎಂಬುದು ಜಿಲ್ಲೆಯ ಶಾಸಕರ ಬಯಕೆಯಾಗಿದೆ. ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದರು

ಇನ್ನು ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್‌ ಬೆಳವಣಿಗೆ ಬಗ್ಗೆ ಸೀರಿಯಸ್‌ ಆಗಿ ಫಾಲೋ ಮಾಡುತ್ತಿಲ್ಲ.‌ ಯಾರು ಏನು ಆಗುತ್ತಿದ್ದಾರೆ. ಏನು ಆಗುತ್ತಿದೆ ಎನ್ನುವ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಸಕ್ರಿಯವಾಗಿಲ್ಲ ಎಂದಿದ್ದಾರೆ.

Tags:
error: Content is protected !!