Mysore
17
clear sky

Social Media

ಗುರುವಾರ, 29 ಜನವರಿ 2026
Light
Dark

ನಂಜನಗೂಡು : ಹುಲಿ ದಾಳಿಗೆ 3 ಹಸುಗಳು ಸಾವು

3 cows killed in tiger attack

ಮಡುವಿನಹಳ್ಳಿ : ಹುಲಿ ದಾಳಿಗೆ ಮೂರು ಹಸುಗಳು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ 3 ಹಸುಗಳನ್ನು ಕೊಂದುಹಾಕಿದೆ.

ಗ್ರಾಮದ ಸುತ್ತಮುತ್ತ ಹುಲಿ ಸಂಚರಿಸುತ್ತಿರುವ ಕುರಿತು ಈಗಾಗಲೇ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದರೂ ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪ ವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್ ಮತ್ತು ಕಿರಣ್ ಅವರು ಸ್ಥಳವನ್ನು ಪರಿಶೀಲಿಸಿ, ಮೃತ ಹಸುಗಳ ಮಹಜರು ಮಾಡಿ, ಸರ್ಕಾರದ ವತಿಯಿಂದ ಪರಿಹಾರ ನೀಡಲು ವರದಿ ಸಲ್ಲಿಸಲಾಗುವುದು ಎಂದರು.

ರೈತ ಮಹೇಶ್ ಮಾತನಾಡಿ, ಸಾಲ ಮಾಡಿ ಹಸುವನ್ನು ತಂದು ಜೀವನ ನಡೆಸುತ್ತಾ, ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದೇನೆ. 70 ಸಾವಿರ ರೂ. ಮೌಲ್ಯದ ಹಸುಗಳು ಹುಲಿ ದಾಳಿಯಿಂದ ಸಾವಿಗೀಡಾಗಿರುವುದರಿಂದ ಜೀವನ ನಡೆಸಲು ಕಷ್ಟವಾಗಿದೆ. ಜಮೀನಿನಲ್ಲಿ ವ್ಯವಸಾಯ ಮಾಡಲು ಭಯವಾಗುತ್ತಿದೆ. ವಲಯ ಅರಣ್ಯ ಅಽಕಾರಿಗಳು ಮತ್ತು ಈ ಭಾಗದ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರು ಹುಲಿ ಸೆರೆಗೆ ಬೋನು ಇರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ನಿಜಲಿಂಗಪ್ಪ ಮಾತನಾಡಿ, ನಮ್ಮ ಹಸುವನ್ನು ಹುಲಿ ದಾಳಿ ಮಾಡಿ ಕೊಂದುಹಾಕಿದೆ. ಇದರಿಂದ ನಮ್ಮ ಜೀವನಕ್ಕೆ ತೊಂದರೆಯಾಗಿದೆ. ಶಾಸಕರು ಮತ್ತು ಸಂಸದರು ಆಗಮಿಸಿ ಅರಣ್ಯ ಅಽಕಾರಿಗಳ ಜೊತೆ ಮಾತನಾಡಿ ರೈತರಿಗೆ ರಕ್ಷಣೆಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಎಂ.ಬಿ.ಬಸವರಾಜ್ ಹಾಗೂ ರೈತ ಸಂಘದ ಸದಸ್ಯರು ಅಽಕಾರಿಗಳು ಮತ್ತು ರೈತರ ಜೊತೆ ಮಾತನಾಡಿ, ನಮಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ಕೊಡಿಸಬೇಕು. ಈ ಭಾಗದಲ್ಲಿ ೩-೪ ದಿನಗಳಿಂದಲೂ ಹುಲಿಗಳು ಓಡಾಡುತ್ತಿದ್ದು, ರೈತರಿಗೆ ಜಮೀನಿಗೆ ಬರಲು ಕಷ್ಟವಾಗುತ್ತಿದೆ. ರಾತ್ರಿ ವೇಳೆ ಜಮೀನಿಗೆ ಹೋಗಲು ರೈತರು ಭಯಪಡುತ್ತಿದ್ದಾರೆ. ಅಽಕಾರಿಗಳು ರಾತ್ರಿ ವೇಳೆ ನಮ್ಮ ಗ್ರಾಮದ ಸುತ್ತಮುತ್ತ ವಾಹನದಲ್ಲಿ ಗಸ್ತು ತಿರುಗಬೇಕು. ಹುಲಿಯನ್ನು ಸೆರೆಹಿಡಿಯಬೇಕು ಎಂದು ಒತ್ತಾಯಿಸಿದರು.

Tags:
error: Content is protected !!