Mysore
23
scattered clouds

Social Media

ಶುಕ್ರವಾರ, 03 ಏಪ್ರಿಲ 2026
Light
Dark

ಕೇರಳದ ಕೊಟ್ಟಿಯೂರು ದೇವಸ್ಥಾನದಿಂದ ಬರುವಾಗ ಭೀಕರ ಅಪಘಾತ: ಮೈಸೂರು ಯುವಕ ಸಾವು

Kottiyur temple

ಮೈಸೂರು: ನೆರೆಯ ಕೇರಳದ ಕೊಟ್ಟಿಯೂರು ದೇವಸ್ಥಾನದಿಂದ ಬರುವಾಗ ಭೀಕರ ಅಪಘಾತ ಸಂಭವಿಸಿ ಮೈಸೂರಿನ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೇರಳ- ಕರ್ನಾಟಕ ಗಡಿ ಬಾವಲಿ ಸಮೀಪದ ಕಾಟಿಕೊಳಂ ಬಳಿ ಈ ಘಟನೆ ನಡೆದಿದ್ದು, ಮೈಸೂರಿನ ಸಿದ್ದಾರ್ಥ ಬಡಾವಣೆ ಯುವಕ ಅನಂತಭೂಷಣ್ ಎಂಬಾತ ಸಾವನ್ನಪ್ಪಿದ್ದಾನೆ.

ಮಳೆ ನೀರು ನಿಂತಿದ್ದ ಹೊಂಡಕ್ಕೆ ಬಿದ್ದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಬಸ್‌ ಚಕ್ರದಡಿ ಸಿಲುಕಿದೆ. ಹೆಲ್ಮೆಟ್‌ ಹಾಕಿದ್ದರೂ ಅನಂತ್‌ ಭೂಷಣ್‌ ಬಸ್‌ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.

ಅನಂತ್ ಭೂಷಣ್ ಮೈಸೂರಿನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಅಪಘಾತದ ದೃಶ್ಯ ಬಸ್‌ನ ಡ್ಯಾಶ್ ಬೋರ್ಡ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Tags:
error: Content is protected !!