ಮೈಸೂರು : ಆಷಾಢ ಮಾಸದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಆಷಾಢ ಮಾಸದ ಪ್ರಯುಕ್ತ ಮೆಟ್ಟಿಲು ಹತ್ತುವ ಭಕ್ತರಿಗೆ ಡ್ರೈಫ್ರೂಟ್ಸ್, ಬಾದಾಮಿ ಹಾಲು ನೀಡಿ, ವಿಶೇಷ ದರ್ಶನ ಕಲ್ಪಿಸುವುದಾಗಿ ಜಿಲ್ಲಾಡಳಿತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಆದರೆ, ಸಮರ್ಪಕವಾಗಿ ವ್ಯವಸ್ಥೆ ಮಾಡದೇ ಸಾರ್ವಜನಿಕರು ಜನಸಂದಣಿಯಲ್ಲಿ ಸಿಲುಕುವಂತೆ ಮಾಡಿದೆ ಎಂದು ದೂರಿದರು.
ಪ್ರತಿವರ್ಷ ನಡೆಸುತ್ತಿದ್ದ ಅನ್ನದಾಸೋಹದ ವ್ಯವಸ್ಥೆಯು ಸಹ ಮೊದಲಿದ್ದ ಸ್ಥಳದಲ್ಲಿ ಇಲ್ಲದೆ ಸಮರ್ಪಕವಾಗಿ ಪೂರೈಕೆಯಿಲ್ಲದಂತಾಗಿದೆ. ಈ ಕೂಡಲೇ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರ ಉಚಿತ ದರ್ಶನಕ್ಕೆ ಹಾಗೂ ಮೆಟ್ಟಿಲು ಹತ್ತಿ ಬರುವ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಗೋಲ್ಡನ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ , ಭಾಗ್ಯಮ್ಮ, ಪದ್ಮ, ಕೃಷ್ಣೇಗೌಡ, ಗಿರೀಶ್, ನಾಗರಾಜು, ಹನುಮಂತಯ್ಯ, ತಾಯೂರು ಗಣೇಶ್, ಕುಮಾರ್ ಗೌಡ, ನಾರಾಯಣಗೌಡ, ಆನಂದ್‌ಗೌಡ, ಬಸವರಾಜು, ಗೀತಾ ಗೌಡ, ಪ್ರಭಾಕರ್, ಮೂರ್ತಿ ಲಿಂಗಯ್ಯ, ರಘು ಅರಸ್, ರಘು ಆಚಾರ್, ನಿತ್ಯಾನಂದ, ದರ್ಶನ್‌ಗೌಡ, ಸ್ವಾಮಿಗೌಡ, ಗಣೇಶ್ ಪ್ರಸಾದ್, ಪರಿಸರ ಚಂದ್ರು, ಚಂದ್ರಶೇಖರ್, ವಿಷ್ಣು ಭಾಗವಹಿಸಿದ್ದರು.





