ಮೈಸೂರು: ಮರಗಳನ್ನು ಕಡಿದ ಜಾಗದಲ್ಲಿ ಈಗ ರಸ್ತೆ ಕಾಮಗಾರಿ ಆರಂಭವಾಗಿದ್ದು, ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಏಪ್ರಿಲ್ 12ರಂದು ರಸ್ತೆ ಅಗಲೀಕರಣಕ್ಕಾಗಿ ಎಸ್‌ಪಿ ಕಚೇರಿ ಬಳಿ ರಾತ್ರೋರಾತ್ರಿ ಸುಮಾರು 40ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿತ್ತು. ಘಟನೆ ಕುರಿತು ಪರಿಸರವಾದಿಗಳಿಂದ ಪ್ರತಿಭಟನಾ ಧರಣಿ ನಡೆಸಲಾಗಿತ್ತು. ಮೈಸೂರಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಹಾಗೂ ಪರಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಮರಗಳನ್ನು ಕಡಿದು ಹಾಕಿರುವ ಜಾಗದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಪರಿಸರವಾದಿಗಳಿಂದ ಮತ್ತೆ ಆಕ್ಷೇಪ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿಂದು ಪರಿಸರವಾದಿ ಎ.ಟಿ ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ರಸ್ತೆ ಅಗಲೀಕರಣಕ್ಕೆ ಅವಕಾಶ ಕೊಡಲ್ಲ. ಇಲ್ಲಿ ಮತ್ತೆ ಗಿಡ ನೆಡಬೇಕು ಎಂದು ಒತ್ತಾಯಿಸಿದರು.





