Mysore
28
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ಸಚಿವರಿಂದ ಅಕ್ರಮ ರೆಸಾರ್ಟ್‌ ; ನೂರಾರು ಕೋಟಿ ಹೂಡಿಕೆ : ಬಿಜೆಪಿ ವಕ್ತಾರ ಮೋಹನ್‌ ಆರೋಪ

ಮೈಸೂರು : ರಾಜ್ಯ ಕಾಂಗ್ರೆಸ್‌ ಸಚಿವರು ತಮ್ಮ ಆಪ್ತರು, ಸಂಬಂಧಿಕರ ಹೆಸರಿಯಲ್ಲಿ ಎಚ್.ಡಿ ಕೋಟೆ ಕಬಿನಿ ಡ್ಯಾಂ ಹಿನ್ನೀರು ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್‌ ಹೊಂದಿದ್ದಾರೆ. ಸಚಿವರುಗಳು ಆಪ್ತರ ಹೆಸರಿನಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಮೋಹನ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಚಿವ ಜಮೀರ್ ಖಾನ್ ಅಕ್ರಮ ರೆಸಾರ್ಟ್ ಹೊಂದಿದ್ದಾರೆ. ಇವರ ಬೆಂಬಲಿಗರು, ಆಪ್ತರ ಹೆಸರಿನಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ನಿಷೇಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ವಸತಿಗಳ ನಿರ್ಮಾಣ ಮಾಡಿದ್ದಾರೆ. ಜಮೀರ್ ಅಹಮದ್ ಖಾನ್ ಪಿಎ ಸರ್ಫರಾಜ್ ಮತ್ತು ಅವರ ಆಪ್ತರ ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಎಚ್.ಡಿ ಕೋಟೆ 4 ಡ್ಯಾಮ್ ಗಳು ಇರುವ ತಾಲೂಕು. ಜೀವ ವೈವಿದ್ಯಗಳಿರುವ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ. ಬಂಡಿಪುರ, ನಾಗರಹೊಳೆ ಒಂದುಗೂಡುವ ಪ್ರದೇಶ. ಇಂತ ಪ್ರದೇಶದಲ್ಲಿ ಹಲವು ಅಕ್ರಮ ರೆಸಾರ್ಟ್ ತಲೆ ಎತ್ತಿವೆ. ಅರಣ್ಯ ಇಲಾಖೆ ನೀತಿ ನಿಯಮಗಳ ಗಾಳಿಗೆ ತೂರಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ಡಿ ದರ್ಜೆ ಗುಮಾಸ್ತ ಸರ್ಫರಾಜ್ ಕಳೆದ 25 ವರ್ಷದಿಂದ ಜಮೀರ್ ಜೊತೆ ಇದ್ದಾರೆ. ಸರ್ಫರಾಜ್ ಸರ್ಕಾರಿ ನೌಕರನಾಗಿ ಬಿಜಿನೆಸ್ ಮಾಡುತಿದ್ದಾನೆ. ಒಬ್ಬ ಡಿ ಗ್ರೂಪ್ ನೌಕರ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ರೆಸಾರ್ಟ್ ಮಾಡಲಿಕ್ಕೆ ಹೇಗೆ ಸಾಧ್ಯ.? ಇದರ ಹಿಂದೆ ಜಮೀರ್ ಅಹಮದ್ ಅವರು ಇದ್ದಾರೆ ಎಂದು ದೂರಿದ್ದಾರೆ.

2015ರಲ್ಲಿ ಟೂರಿಸಮ್ ಪಾಲಿಸಿ ಪ್ರಕಾರ ಅತಿಥಿ ಸ್ಕೀಮ್ ನಲ್ಲಿ ಹಿಂದು ಸ್ಟೇ ಅನ್ನು ರೈತರು ಮಾಡಲು ಅವಕಾಶ ಇದೆ. ರೈತ ತಾನು ವಾಸ ಇದ್ದು ಜೊತೆಗೆ 4 ಎಕ್ಸ್‌ಟ್ರಾ ರೂಮ್ ಮಾಡಿ ಆ ರೈತನೇ ಅದನ್ನು ಮೆಂಟೇನ್ ಮಾಡಬೇಕು ಎಂಬ ನಿಯಮ ಇದೆ. ರೆಸಾರ್ಟ್ ಇಲ್ಲಿ 20 ಕ್ಕೂ ಹೆಚ್ಚು ರೂಮ್ ಇವೆ. ಸರ್ಫರಾಜ್ ಹೆಡ್ ಕ್ವಾಟರ್ ಬೆಂಗಳೂರು. ಇಲ್ಲಿ ಹೇಗೆ ಮೆಂಟೇನ್ ಮಾಡಲು ಸಾಧ್ಯ. ಅದನ್ನು ನೋಡಿಕೊಳ್ಳಲು ಒಬ್ಬ ಮೌಲ್ವಿ ಇದ್ದಾನೆ. ಒಬ್ಬ ಅತಿಥಿಗೆ 25000 ಚಾರ್ಜ್ ಮಾಡುತ್ತಾರೆ. ಆ ರೆಸಾರ್ಟ್ ಪಕ್ಕದಲ್ಲೇ ಸರ್ಫರಾಜ್ ಪರ್ಸನಲ್ ಡ್ರೈವರ್ 4 ಎಕೆರೆ ಜಾಗದಲ್ಲಿ 100 ಕೋಟಿ ಇನ್ವೆಸ್ಟ್ ಮಾಡಿ ದೊಡ್ಡ ಬಿಲ್ಡಿಂಗ್ ಕಟ್ಟುತಿದ್ದಾರೆ. ಒಬ್ಬ ಡ್ರೈವರ್ ಇಷ್ಟು ಇನ್ವೆಸ್ಟ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲಿ ಒಂದು C l7 ಬಾರ್ ಇದೆ. C l7 ರಲ್ಲಿ ಬೇರೆ ಕಡೆ ಪಾರ್ಸಲ್ ಕೊಡುವ ಹಾಗಿಲ್ಲ. ಆದರೆ ರಾತ್ರಿ 11 ಗಂಟೆಯವರೆಗೆ ಓಪನ್ ಇರುತ್ತೆ. ಇದೆಲ್ಲ ಜಮೀರ್ ಅಹಮದ್ ಕೈವಾಡ ಇಲ್ಲದೆ ನಡೆಯೋದಿಲ್ಲ. 15 ದಿನಕ್ಕೊಮ್ಮೆ ರೆಸಾರ್ಟ್ ಗೆ ಜಮೀರ್ ಬರುತ್ತಾರೆ. ಬಂದು ಎಲ್ಲಾ ರೈತರಿಗೆ ದುಡ್ಡನ್ನು ಕಡ್ಲೆಪುರಿ ಹಂಚಿದ ಹಾಗೇ ಹಂಚುತ್ತಾರೆ. ಕಾಡಂಚಿನಲ್ಲಿ ಬೃಹತ್ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರ್ಯಾರು.? ಇವುಗಳ ಹತ್ತಿರ ಇನ್ನೊಂದು ರೆಸಾರ್ಟ್ ಕಾಂಗ್ರೆಸ್ ಸಚಿವರಾದ ಸತೀಶ್ ಜಾರಕಿಹೊಳೆ ಸಂಬಂಧಿಕರ ಹೆಸರಲ್ಲಿ ಇದೆ ಎಂದು ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸತ್ಯ ಶೋಧನೆ ಸಮಿತಿ ಮಾಡುತ್ತೇವೆ. ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮ ರೆಸಾರ್ಟ್ ಇರುವಲ್ಲಿಗೆ ಮಾಧ್ಯಮ ಪ್ರತಿನಿಧಿಗಳನ್ನ ಕರೆದುಕೊಂಡು ಹೋಗಿ ವಾಸ್ತವಾಂಶ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ದಾಖಲೆ ಸಮೇತ ಲೋಕಾಯುಕ್ತ ಎಸ್ ಪಿ ಉದೇಶ್ ಗೆ ದೂರು ಕೊಟ್ಟಿದ್ದೇವೆ. ಅಕ್ರಮ ರೆಸಾರ್ಟ್ ಗಳಲ್ಲಿ ಸಚಿವ ಜಮೀರ್ ಅಹಮದ್ ಬಂಡವಾಳ ಹೂಡಿಕೆ ಇದೆ. ಇಷ್ಟೆಲ್ಲಾ ಅಕ್ರಮಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Tags:
error: Content is protected !!