ಮೈಸೂರು: ರಾಜ್ಯ ಮಟ್ಟದ ಲಾಂಗ್ ಜೆಂಪ್‌ನಲ್ಲಿ ಮೈಸೂರಿನ ಬಾಲಕಿಯೋರ್ವಳು ಚಿನ್ನ ಹಾಗೂ ಬೆಳ್ಳಿ ಗೆದ್ದು ಪೋಷಕರು ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ.
ಮೈಸೂರಿನ ಹೆಬ್ಬಾಳ್ ನಿವಾಸಿ ಕಿಶೋರ್ ಹಾಗೂ ನಂದಿನಿ ದಂಪತಿಯ ಪುತ್ರಿ ಯುಕ್ತಿ ಕೆ ಎಂಬಾಕೆ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಹಾಗೂ 4 × 100 ರಿಲೆಯಲ್ಲಿ ಚಿನ್ನದ ಪದಕ ಗೆದ್ದು ಬಂದಿದ್ದಾಳೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರು ಬಾಲಕಿ ಯುಕ್ತಿ ಉತ್ತಮ ಸಾಧನೆ ಮಾಡಿದ್ದು, ಎಲ್ಲರ ಮನಗೆದ್ದಿದ್ದಾಳೆ. ಮೈಸೂರಿನ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಯುಕ್ತಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಶಾಲೆಗೂ ಕೀರ್ತಿ ತಂದಿದ್ದು, ಯುಕ್ತಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.





