Mysore
19
few clouds

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ: ಕೆಆರ್‌ಎಸ್ ಪ್ರವೇಶ ದರ ಇಳಿಸಿ

ಓದುಗರ ಪತ್ರ

ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಯನ್ನು ವೀಕ್ಷಿಸಲು ದೇಶದ ವಿವಿಧೆಡೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ರಾಜ್ಯ ಸರ್ಕಾರ ಇತ್ತೀಚೆಗೆ ಕೆಆರ್‌ಎಸ್ ಪ್ರವೇಶ ದರವನ್ನು ಹೆಚ್ಚಳ ಮಾಡಿರುವುದು ಪ್ರವಾಸಿಗರಿಗೆ ಬರೆ ಎಳೆದಂತಾಗಿದೆ. ಈ ಹಿಂದೆ ನಾಲ್ಕು ಚಕ್ರ ವಾಹನಗಳಿಗೆ ನೂರು ರೂ. ಪಾರ್ಕಿಂಗ್ ಶುಲ್ಕ ಇದ್ದಿದ್ದನ್ನು ೨೦೦ ರೂ.ಗೆ ಹೆಚ್ಚಳ ಮಾಡಲಾಗಿದೆ. ಅಷ್ಟೇ ಅಲ್ಲದೇ ಟೋಲ್‌ನಲ್ಲಿ ೧೦೦ ರೂ. ಶುಲ್ಕವನ್ನು ಪಡೆಯಲಾಗುತ್ತಿದೆ. ೫೦ ರೂ. ಇದ್ದ ಪ್ರವೇಶದರವನ್ನು ೧೦೦ ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಕೆಆರ್‌ಎಸ್ ಸದ್ಯ ದೀಪಗಳ ಅಲಂಕಾರವಿಲ್ಲದೆ ಕಳೆಗುಂದಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ದುಬಾರಿ ಹಣ ತೆತ್ತು ಬೇಸರದಿಂದ ವಾಪಸಾಗುತ್ತಿದ್ದಾರೆ.

ಸಂಬಂಧಪಟ್ಟವರು ಈಗಲಾದರೂ ಪ್ರವೇಶದರ ಹಾಗೂ ವಾಹನ ಪಾರ್ಕಿಂಗ್ ಶುಲ್ಕವನ್ನು ಕೂಡಲೇ ಕಡಿಮೆ ಮಾಡುವುದರೊಂದಿಗೆ ಕೆಆರ್ ಎಸ್‌ನಲ್ಲಿ ಈ ಮೊದಲಿನಂತೆಯೇ ವಿದ್ಯುತ್ ದೀಪಾಲಂಕಾರ, ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.

-ಸಿದ್ದಲಿಂಗೆಗೌಡ, ಹೈರಿಗೆ ಗ್ರಾಮ, ಎಚ್. ಡಿ. ಕೋಟೆ ತಾ.

Tags:
error: Content is protected !!