Mysore
27
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಸಿಎಂ ಖುರ್ಚಿ ಖಾಲಿ ಇಲ್ಲ : ಸಚಿವ ಮಹದೇವಪ್ಪ

hc mahadevappa

ಮೈಸೂರು: ರಾಜ್ಯದಲ್ಲಿ ಯಾವ ಕುರ್ಚಿ ಖಾಲಿ ಇದೆಯೋ ಗೊತ್ತಿಲ್ಲ. ಸದ್ಯಕ್ಕಿರುವ ಸಿಎಂ ಕುರ್ಚಿ ಖಾಲಿ ಇಲ್ಲ, ಸಿಎಂ ಕುರ್ಚಿ ಭದ್ರವಾಗಿದೆ. ಅದರ ಮೇಲೆ ಕೂತಿರುವ ಸಿದ್ದರಾಮಯ್ಯನವರು ಭದ್ರವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಬರುವ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸ್ಥಿರವಾಗಿದೆ. ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಯಾವಾಗ ತಾನೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ ಹೇಳಿ. ಅವರು ವಾಮ ಮಾರ್ಗದಿಂದಲೇ ಅಽಕಾರ ಹಿಡಿದಿದ್ದು, ಆಪರೇಷನ್ ಕಮಲದ ಮೂಲಕ ಅನೈತಿಕ ಮೈತ್ರಿ ಮಾಡಿ ಕೊಂಡು ಅಧಿಕಾರಕ್ಕೆ ಬಂದಿದ್ದರು. ನಮ್ಮ ಕಾಂಗ್ರೆಸ್ ಶಾಸಕರ ಮೇಲು ಅಂತಹ ಪ್ರಯತ್ನ ಮಾಡಿದರು. ನಮ್ಮಲ್ಲಿ ೧೩೬ ಸೀಟುಗಳನ್ನು ಗೆದ್ದು ಸ್ಪಷ್ಟ ಬಹುಮತ ಇರುವುದರಿಂದ ಅವರ ಪ್ರಯತ್ನ ಕೈಗೂಡಿಲ್ಲ. ಆದರೂ ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿದ್ದಾರೆ. ಅದು ನಡೆದಿಲ್ಲ ಅಷ್ಟೇ ಎಂದು ತಿರುಗೇಟು ನೀಡಿದರು.

Tags:
error: Content is protected !!