ಮೈಸೂರು : ಪ್ರಸ್ತುತ 2025ನೇ ಸಾಲಿನ ಆಷಾಡ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ.
ನಾಲ್ಕು ಆಷಾಡ ಶುಕ್ರವಾರಗಳು ಮತ್ತು ಜನ್ಮೋತ್ಸವದ ಪ್ರಯುಕ್ತ ಜೂನ್ 27 ಮೊದಲನೇ ಆಷಾಡ ಶುಕ್ರವಾರ ಜುಲೈ 4 ಎರಡನೇ ಆಷಾಡ ಶುಕ್ರವಾರ ಜುಲೈ 11 ಮೂರನೇ ಆಷಾಡ ಶುಕ್ರವಾರ, ಜುಲೈ 17ರ ಜನ್ಮೋತ್ಸವ ಮತ್ತು ಜುಲೈ 18 ನಾಲ್ಕನೇ ಆಷಾಡ ಶುಕ್ರವಾರಗಳಂದು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಭಕ್ತಾಧಿಗಳಿಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





