Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಓದುಗರ ಪತ್ರ: ದುಬಾರಿಯಾದಳು ಶ್ರೀ ಚಾಮುಂಡೇಶ್ವರಿ ತಾಯಿ !

ಓದುಗರ ಪತ್ರ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಸೇವೆಗಳ ಶುಲ್ಕಗಳನ್ನು ಹೆಚ್ಚಿಸಲಾಗಿದ್ದು. ರೂ. 300 ರಿಂದ ರೂ. 550 ಹಾಗೂ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕಾಗಿ 2000 ರೂ. ಟಿಕೆಟ್ ದರ ನಿಗದಿಪಡಿಸಿರುವುದು ಸರಿಯಲ್ಲ. ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪ್ರವಾಸಿಗರು ಬೇಸರ  ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ನೀರಿನ ಕಂದಾಯ, ವಿದ್ಯುತ್, ಸ್ಟ್ಯಾಂಪ್ ಪೇಪರ್, ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ, ಆಸ್ತಿ ನೋಂದಣಿ ಮುದ್ರಾಂಕ ಶುಲ್ಕ, ಜಮೀನು ಮತ್ತು ನಿವೇಶನಗಳ ತೆರಿಗೆಗಳನ್ನು ಏರಿಸಲಾಗಿದ್ದು ಇದರಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಸರ್ಕಾರ ಕೂಡಲೇ ೨೦೦೦ ರೂ. ದುಬಾರಿ ಟಿಕೆಟ್ ವಿಶೇಷ ದರ್ಶನವನ್ನು ರದ್ದುಗೊಳಿಸಿ ಪ್ರತಿಯೊಬ್ಬರಿಗೂ ಭೇದ ಭಾವವಿಲ್ಲದೆ ದರ್ಶನ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕಾಗಿದೆ.

– ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ

Tags:
error: Content is protected !!