Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಾರುಕಟ್ಟೆಗೆ ಬರಲಿದೆ ಟ್ರಂಪ್‌ ಕಂಪೆನಿಯ `ಟಿ1′ ಸ್ಮಾರ್ಟ್‌ಫೋನ್‌

ತನ್ನ ದಿಢೀರ್ ನಿರ್ಧಾರಗಳ ಮೂಲಕ ಜಗತ್ತಿನ ಹಲವು ರಾಷ್ಟ್ರಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮೊಬೈಲ್ ಲೋಕದ ದೈತ್ಯ ಕಂಪೆನಿಗಳಾದ ಸ್ಯಾಮ್ ಸಂಗ್, ಆಪಲ್, ಗೂಗಲ್‌ನಂತಹ ಕಂಪೆನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ಅವರಿಗೆ ತೀರಾ ಇತ್ತೀಚೆಗೆ ಡೊನಾಲ್ಡ್ ಟ್ರಂಪ್, ಭಾರತದ ಬದಲಿಗೆ ಅಮೆರಿಕದಲ್ಲಿ ಕಂಪೆನಿ ಸ್ಥಾಪಿಸುವಂತೆ ಮನವಿ ಮಾಡಿದ್ದರಾದರೂ ಟಿಮ್‌ಕುಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ನಡುವೆಯೇ ಟ್ರಂಪ್ ಒಡೆತನದ ಕಂಪೆನಿಯು ಇದೀಗ ಅಮೆರಿಕದಲ್ಲಿ ಸ್ಮಾರ್ಟ್ ಫೋನ್ ಲೋಕಕ್ಕೆ ಕಾಲಿಡಲು ಸಜ್ಜಾಗಿದೆ. ಟ್ರಂಪ್ ಕಂಪೆನಿಯು ತನ್ನ ಮೊಬೈಲ್‌ಗೆ ‘ಟಿ ೧’ ಎಂದು ಹೆಸರಿಟ್ಟಿದ್ದು, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಈ ಮೊಬೈಲ್ ಫೋನ್ ಲಭ್ಯವಾಗಲಿದೆ.

ಅಮೆರಿಕದಲ್ಲಿ ತಯಾರಿಸಲಾಗಿರುವ ‘ಟಿ ೧’ ಮೊಬೈಲ್ ಫೋನ್ ಗೂಗಲ್‌ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೊಬೈಲ್ -ನ್‌ನ ಬಿಡುಗಡೆ ಪೂರ್ವ ಬುಕ್ಕಿಂಗ್ ಪ್ರಾರಂಭ ವಾಗಿದ್ದು, ಬೆಲೆ ೪೯೯ ಡಾಲರ್ ನಿಗದಿಪಡಿಸಲಾಗಿದೆ. ಅಂದರೆ ಬಾರತದಲ್ಲಿ ಈ ಮೊಬೈಲ್‌ನ್ನು ಬೆಲೆ ಅಂದಾಜು ೪೩,೦೦೦ ರೂ. ಗಳಾಗಬಹುದು. ಬಳಕೆದಾರರು ೧೦೦ ಡಾಲರ್‌ಗಳನ್ನು ಅಂದರೆ ಸುಮಾರು ೮,೩೦೦ ರೂಪಾಯಿಗಳನ್ನು ಪಾವತಿಸುವ ಮೂಲಕ ಇಎಂಐ ಮೂಲಕವೂ ಈ ಮೊಬೈಲ್ ಫೋನ್ ಖರೀದಿಸಬಹುದು ಎಂದು ಹೇಳಲಾಗಿದೆ.

Tags:
error: Content is protected !!