Mysore
23
overcast clouds

Social Media

ಶನಿವಾರ, 20 ಜೂನ್ 2026
Light
Dark

ಮೈಸೂರು| ಹನಿಟ್ರ್ಯಾಪ್‌ ಪ್ರಕರಣ: ಕಾನ್ಸ್‌ಟೇಬಲ್‌ ಸೇರಿ ಐವರ ಬಂಧನ

arrested

ಮೈಸೂರು: ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್‌ ಖೆಡ್ಡಾಗೆ ಕೆಡವಿ ಹಣ ದೋಚುತ್ತಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಜಾಲದಲ್ಲಿ ಭಾಗಿಯಾಗಿದ್ದ ಪಿರಿಯಾಪಟ್ಟಣ ಠಾಣೆ ಕಾನ್ಸ್‌ಟೇಬಲ್‌ ಶಿವಣ್ಣ, ಮೂರ್ತಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್‌ ಕುಮಾರ್‌ ಅವರನ್ನು ಖೆಡ್ಡಾಗೆ ಕೆಡವಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ದೋಚಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಯುವತಿಯೊಬ್ಬಳು ದಿನೇಶ್‌ ಅವರ ಬಟ್ಟೆ ಅಂಗಡಿಗೆ ತೆರಳಿ ಪರಿಚಯ ಮಾಡಿಕೊಂಡಿದ್ದಳು. ದಿನೇಶ್‌ ಕುಮಾರ್‌ ನಂಬರ್‌ ಪಡೆದು ವಾಟ್ಸಾಪ್‌ ಚಾಟಿಂಗ್‌ ಕೂಡ ಶುರು ಮಾಡಿದ್ದಳು. ಮನೆಯಲ್ಲಿ ಯಾರೂ ಇಲ್ಲ, ಕಾಫಿಗೆ ಬನ್ನಿ ಎಂದು ದಿನೇಶ್‌ ಕುಮಾರ್‌ಗೆ ಆಹ್ವಾನ ನೀಡಿದ್ದಳು.

ಯುವತಿ ಮಾತಿಗೆ ಮರುಳಾದ ದಿನೇಶ್‌ ಕುಮಾರ್‌ ಆಕೆಯ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ ಕಾನ್ಸ್‌ಟೇಬಲ್‌ ಶಿವಣ್ಣ ಹಾಗೂ ಮೂರ್ತಿ ದಿನೇಶ್‌ ಕುಮಾರ್‌ಗೆ ಹಿಗ್ಗಾಮುಗ್ಗಾ ಥಳಿಸಿ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಹೊರಗಡೆ ಹೇಳಬಾರದು ಎಂದರೆ 10 ಲಕ್ಷ ಹಣ ಕೊಡು ಎಂದು ಹೆದರಿಸಿದ್ದಾರೆ. ಈ ವೇಳೆ ದಿನೇಶ್‌ ಕುಮಾರ್‌ ಸಹೋದರನಿಗೆ ಕರೆ ಮಾಡಿ 10 ಲಕ್ಷ ಹಣ ತರುವಂತೆ ಹೇಳಿದ್ದಾರೆ.

10 ಲಕ್ಷ ಹಣ ತರುವಂತೆ ದಿನೇಶ್‌ ಹೇಳಲು ಕಾರಣವೇನು ಎಂದು ಅನುಮಾನಗೊಂಡಿದ್ದ ಸಹೋದರ ಬೆಟ್ಟದಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾನ್ಸ್‌ಟೇಬಲ್‌ ಶಿವಣ್ಣ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

Tags:
error: Content is protected !!